ಲಕ್ನೋ: ಮಹಿಳೆಯೊಬ್ಬರು ಪತಿಯೂ ಬೇಕು, ಲವರ್ ಕೂಡ ಬೇಕು ಎಂದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಮಹಿಳೆಯೊಬ್ಬರು ಇಬ್ಬರೂ ಬೇಕೆಂದು ವಿದ್ಯುತ್ ಕಂಬದ ಮೇಲೆ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಪಟ್ಟಣವೊಂದರಲ್ಲಿ ನಡೆದಿದೆ. ಗೋರಖ್ ಪುರದ ಪಿಪ್ರೈಚ್ ನಲ್ಲಿ 34 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧದ ಕುರಿತು ಪತಿಗೆ ತಿಳಿದ ನಂತರ ವಿದ್ಯುತ್ ಕಂಬ ಹತ್ತಿ ರಾದ್ಧಾಂತ ಮಾಡಿದ್ದಾಳೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಈ ವೇಳೆ ಅವಳಿಗೆ ಪಕ್ಕದ ಗ್ರಾಮದ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಈ ಪರಿಚಯ ಪ್ರೇಮಕ್ಕೆ ತಿರುಗಿದೆ. ಆನಂತರ ಇಬ್ಬರೂ ದೈಹಿಕ ಸಂಬಂಧ ಬೆಳೆಸಿದ್ದಾರೆ.
ಪತಿ ರಾಮ್ ಗೋವಿಂದ್ ಕೂಲಿ ಮಾಡುತ್ತಿದ್ದ. ಇತ್ತೀಚೆಗೆ ಇವರಿಬ್ಬರ ಪ್ರೀತಿ ವಿಚಾರ ಪತಿಯ ಗಮನಕ್ಕೆ ಬಂದಿದೆ. ದಂಪತಿ ನಡುವೆ ವಾಗ್ವಾದ ನಡೆಯಿತು. ಪ್ರಿಯತಮನಿಗೂ ಮನೆಯಲ್ಲಿ ಇರಲು ಅವಕಾಶ ಕಲ್ಪಿಸಬೇಕು ಮತ್ತು ಮನೆಯ ಆರ್ಥಿಕತೆಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾಳೆ. ಪತ್ನಿಯ ಮಾತಿನಿಂದ ಕೋಪಗೊಂಡ ರಾಮ್ ಗೋವಿಂದ್, ಕೂಡಲೇ ಮನೆಯಿಂದಲೇ ಹೊರ ನಡೆದಿದ್ದಾನೆ.
ಪತಿ ಹಾಗೂ ಪ್ರಿಯತಮ ಇಬ್ಬರೂ ನನಗೆ ಬೇಕು ಎಂದು ಹೇಳಿ ಮನೆಯ ಪಕ್ಕದಲ್ಲೇ ಇರುವ ವಿದ್ಯುತ್ ಕಂಬವೇರಿ ಮಹಿಳೆ ಪ್ರತಿಭಟನೆ ನಡೆಸಿದ್ದಾಳೆ. ಮಹಿಳೆಯು ವಿದ್ಯುತ್ ಕಂಬವನ್ನು ಏರುತ್ತಿರುವುದು ನೋಡುಗರನ್ನು ದಿಗ್ಭ್ರಮೆಗೊಳಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕೆಳಗೆ ಇಳಿಸಿದ್ದಾರೆ.