ನಟ ಶಾರುಕ್ ಖಾನ್ ಅವರು ಜವಾನ್ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದು, ಇದರ ಮಧ್ಯೆಯೇ ಫ್ಯಾನ್ಸ್ ಪ್ರಶ್ನೆಗಳಿಗೆ ಉತ್ತರಿಸುವ ‘ಆಸ್ಕ್ ಎಸ್‌ಆರ್‌ಕೆ’ (askSRK) ಸೆಷನ್ ನ್ನು ನಡೆಸುತ್ತಿದ್ದಾರೆ. ಟ್ವಿಟರ್ ನಲ್ಲಿ ಅವರ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ.
ಹಾಸ್ಯದ ರೂಪದ ಉತ್ತರ, ಸೀರಿಯಸ್ ಉತ್ತರಗಳು ಕೂಡ ಇದರಲ್ಲಿ ಇರುತ್ತವೆ. ಅಭಿಮಾನಿಯೊಬ್ಬರು ಶಾರುಖ್‌ಗೆ (Shah Rukh Khan) ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಮೊದಲು ಹೌದು ಎಂದಿದ್ದ ಶಾರುಖ್, ನಂತರ ಈಗ ನಿಜ ಹೇಳುತ್ತಿದ್ದೇನೆ.. ನಾನು ಆಗ ಸುಳ್ಳು ಹೇಳಿದ್ದೆ. ಕ್ಯಾನ್ಸರ್ ಸ್ಟಿಕ್ನ ಕಡ್ಡಿಯ ಹೊಗೆ ನನ್ನ ಸುತ್ತಲೂ ಆವರಿಸಿಕೊಂಡಿದೆ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಯವಿಟ್ಟು ಹೀಗೆಲ್ಲಾ ಹೇಳಬೇಡಿ. ನೀವು ಬಹು ವರ್ಷ ಬಾಳುತ್ತೀರಿ. ನಿಮ್ಮ ಪ್ರೀತಿ ಜಗತ್ತಿಗೆ ಅಗತ್ಯವಾಗಿದೆ. ನಿಮ್ಮನ್ನು ಪ್ರೀತಿಸುವವರು ಬಹಳ ಜನ ಇದ್ದಾರೆ ಎಂದು ಹೇಳಿದ್ದಾರೆ.
2011 ರಲ್ಲಿ ಶಾರುಖ್ ಖಾನ್ ಅವರು ಸಂದರ್ಶನವೊಂದರಲ್ಲಿ ಧೂಮಪಾನದ ಅಭ್ಯಾಸದ ಬಗ್ಗೆ ಮಾತನಾಡಿದ್ದರು. ‘ನನಗೆ ನಿದ್ದೆ ಬರುತ್ತಿಲ್ಲ’ ಎಂದು ಹೇಳಿದ್ದರು. ಆ ಸಮಯದಲ್ಲಿ ತಮಗಿದ್ದ ಸ್ಮೋಕಿಂಗ್ ಅಭ್ಯಾಸದ ಕುರಿತು ಮಾತನಾಡಿದ್ದರು. ನಾನು ಸುಮಾರು 100 ಸಿಗರೇಟ್ (cigarette) ಸೇದುತ್ತೇನೆ. ಸ್ಮೋಕಿಂಗ್ ಮಾಡುತ್ತಾ ತಿನ್ನುವುದನ್ನೂ ಸಹ ಮರೆತುಬಿಡುತ್ತೇನೆ. ಅಷ್ಟೇ ಅಲ್ಲ ನಾನು ನೀರು ಕೂಡ ಕುಡಿಯುವುದಿಲ್ಲ. ಒಟ್ಟಾರೆಯಾಗಿ ನಾನು ಮೂವತ್ತು ಕಪ್ ಕಪ್ಪು ಕಾಫಿ ಕುಡಿಯುತ್ತೇನೆ. ಇದೇ ವೇಳೆ ನನ್ನ ಸಿಕ್ಸ್ ಪ್ಯಾಕ್ ಕಾಪಾಡಿಕೊಳ್ಳುವ ಅಗತ್ಯವೂ ಇದೆ. ಆದರೆ ನಾನು ನನ್ನ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದರು. ಈಗ ಮತ್ತೆ ಈ ಮಾತು ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಶಾರುಖ್ ಖಾನ್ ಕೊನೆಯದಾಗಿ ‘ಪಠಾಣ್’ (Pathaan) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅಟ್ಲಿ ಕುಮಾರ್ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸೌತ್ ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ಕಾಣಿಸಿಕೊಳ್ಳಲಿದ್ದಾರೆ.








