ನಾನು ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿದ್ದೆ : ಹೆಚ್ ಡಿಕೆ
ಬೆಂಗಳೂರು : ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸೋಮಶೆಟ್ಟಿಹಳ್ಳಿ ಮೈದಾನದಲ್ಲಿ ಇಂದು ‘ಸಾಂತ್ವನ ಸಭೆ’ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ರಾಜ್ಯದಲ್ಲಿ ಸ್ವತಂತ್ರ ಸಿಎಂ ಆಗಿರಲಿಲ್ಲ, ಒಬ್ಬ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದೆ.
ನಾನು ನೇರವಾಗಿ ಸಭೆ ಮಾಡುವಂತಿರಲಿಲ್ಲ. ಅಂತಹ ಇಕ್ಕಟ್ಟಿನಲ್ಲಿ 14 ತಿಂಗಳ ಕಾಲ ಸಿಎಂ ಆಗಿದ್ದೆ.
ನಾನು ಶ್ರೀಮಂತರ ಪರವಾಗಿರಲಿಲ್ಲ. ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು 2006 ರಲ್ಲಿ ನಾನು ಸಿಎಂ ಆಗಿದ್ದಾಗ ಮೂರು ಬಡಾವಣೆಗಳನ್ನು ಘೋಷಣೆ ಮಾಡಿದೆ. ಅರ್ಕಾವತಿ ಬಡಾವಣೆಯಲ್ಲಿ ಕರ್ಮಕಾಂಡ ಆಗಿತ್ತು.
2013 ರಲ್ಲಿ ಅರ್ಕಾವತಿ ಬಡಾವಣೆ ಮುಗಿದ ಹೋದ ಅಧ್ಯಾಯ ಆಗಿತ್ತು. ಇವತ್ತು ಶಿವರಾಮ ಕಾರಂತ್ ಬಡಾವಣೆ ವಿಚಾರದಲ್ಲಿ ನಿಯಮ ಪಾಲನೆ ಆಗುತ್ತಿಲ್ಲ.
ಬಡಾವಣೆ ರಚನೆಯಲ್ಲಿ ಶೇ. 40 ಭಾಗವನ್ನು ರೈತರಿಗೆ ನೀಡಬೇಕು ಎಂಬ ನಿರ್ಧಾರ ಮಾಡಿದ್ದೆ. ಆದರೆ, ಇವತ್ತು ಯಾವ್ಯಾವ ನಿಯಮ ಪಾಲನೆ ಆಗ್ತಾ ಇದೆ ಎಂಬುದು ಗೊತ್ತಿಲ್ಲ ಎಂದು ಕಿಡಿಕಾರಿದರು.