ಮಂಡ್ಯ : ಕೊರೊನಾ ಮೆಡಿಕಲ್ ಕಿಟ್ ಖರೀದಿಯಲ್ಲಿ 2 ಸಾವಿರ ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಅವರು ಲೀಗಲ್ ನೋಟಿಸ್ ಕೊಡಲಿ ಅಂತಾನೇ ಕಾಯುತ್ತಿದ್ದೆ ಎಂದು ಲೇವಡಿ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ನಮಗೆ ಬಿಜೆಪಿ ಲೀಗಲ್ ನೋಟಿಸ್ ನೀಡಿದೆ. ನಾನು ನೋಟಿಸ್ ಕೊಡಲಿ ಅಂತಾನೇ ಕಾಯ್ತಾ ಇದ್ದೆ. ಆದ್ರೆ, ಯಾರೋ ಎಂಎಲ್‌ಸಿ ಕೈಯಿಂದ ನೋಟಿಸ್ ಕೊಡಿಸಿದೆ. ನಾವು ಸರ್ಕಾರದ ಮೇಲೆ ಆರೋಪ ಮಾಡಿದ್ದೇವೆ. ಹಾಗಾಗಿ ನಮಗೆ ನೋಟಿಸ್ ಕೊಡಬೇಕಾದದ್ದು ಚೀಫ್ ಸೆಕ್ರಟರಿ. ಇಲ್ಲವೇ ಸಿಎಂ, ಡಿಸಿಎಂ, ಸಚಿವರ ಕೈಯಿಂದಾದ್ರು ನೋಟಿಸ್ ಕೊಡಿಸಬೇಕಿತ್ತು. ಆದರೆ, ಎಂಎಲ್‌ಸಿ ರವಿಕುಮಾರ್ ಕೈಲಿ ನೋಟಿಸ್ ಕೊಡಿಸಿದ್ದಾರೆ ಎಂದರು.