Virat Kohli ಸೆಂಚೂರಿ ಸಿಡಿಸೋವರೆಗೂ ಮದ್ವೆ ಆಗಲ್ಲ…
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿ ಎರಡು ವರ್ಷಗಳಾಗುತ್ತಿದೆ. ಕೊಹ್ಲಿ ಕೊನೆಯ ಬಾರಿಗೆ 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದರು.
ಇದೀಗ ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ವೃತ್ತಿಬದುಕಿನ ನೂರನೇ ಟೆಸ್ಟ್ ಪಂದ್ಯವಾಗಿದೆ.
ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.
ಆದರೆ, ಕೊಹ್ಲಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 45 ರನ್ ಗಳಿಸಿ ಔಟ್ ಆದರು.
ಆ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ.
ಆದರೆ, ಪಂದ್ಯದ ಎರಡನೇ ದಿನದಂದು ಕ್ರೀಡಾಂಗಣದಲ್ಲಿ ಅಭಿಮಾನಿಯೊಬ್ಬರು ಹಿಡಿದ ಪ್ಲಕಾರ್ಡ್ ಇದೀಗ ವೈರಲ್ ಆಗಿದೆ.
ಪ್ಲಕಾರ್ಡ್‌ನಲ್ಲಿ ಅಭಿಮಾನಿ, ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕವನ್ನು ಸಾಧಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 574 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.
ಶ್ರೀಲಂಕಾ ಮೊದಲ ಇನ್ನಿಂಗ್ಸ್ ನಲ್ಲಿ 174 ರನ್ ಗಳಿಗೆ ಆಲೌಟ್ ಆಗಿದ್ದು, ಫಾಲೋ ಆನ್ ನಲ್ಲಿ 139ಕ್ಕೆ ಏಳು ವಿಕೆಟ್ ಕಳೆದುಕೊಂಡಿದೆ. i-will-not-get-married-until-virat-scores-his-71st 100