ಕಲಾವಿದರ ಸಂಘದಲ್ಲಿ ಜರುಗಿದ್ದು, ದರ್ಶನ್ ಗಾಗಿ ಅಲ್ಲ, ಚಿತ್ರರಂಗದ ಏಳಿಗೆಗಾಗಿ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಗೋಸ್ಕರ (Darshan) ಪೂಜೆ ಮಾಡಿದ್ದರೆ ನಾನು ಬರುತ್ತಿಲಿಲ್ಲ. ಆದರೆ ಈ ಪೂಜೆ ದರ್ಶನ್ಗಾಗಿ ಅಲ್ಲ, ಕಲಾವಿದರ ಒಳಿತಿಗಾಗಿ ಮಾಡಿರುವುದು ಎಂದು ಹೇಳಿದ್ದಾರೆ.
ನನಗೂ ಅನೇಕರು ಇದರ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಕುರಿತು ಮಾಹಿತಿ ಪಡೆದುಕೊಂಡಿದ್ದೆ. ಚಿತ್ರರಂಗದ ಏಳಿಗೆಗಾಗಿ ಎಂದ್ಮೇಲೆ ನಾನು ಭೇಟಿ ಕೊಟ್ಟಿದ್ದು ಎಂದು ಜಗ್ಗೇಶ್ ಹೇಳಿದ್ದಾರೆ.
ನಾಗಾರಾಧನೆ ವೇಳೆ, ಒಗ್ಗಟಾಗಿ ಕೆಲಸ ಮಾಡಿ ಎಂದು ನಾಗದೇವರು ಹೇಳಿದ್ದರು ಎಂದಿದ್ದಾರೆ. ಆದ್ಯಾತ್ಮಿಕವಾಗಿ ಇದ್ದೇವೆ. ಕೆಲವರಿಗೆ ದೇವರು ಎಂದರೆ ಆಗಲ್ಲ. ದೇವರು ನಂಬಿರುವವರ ಬೆಳವಣಿಗೆ ಹೇಗಿದೆ, ನಂಬದೇ ಇರುವವರ ಬೆಳವಣಿಗೆ ಹೇಗಿದೆ ನೋಡಿ ಎಲ್ಲರಿಗೂ ಅಲ್ಲಿಯೇ ಉತ್ತರ ಸಿಗುತ್ತದೆ ಎಂದು ಹೇಳಿದ್ದಾರೆ.