ಸರಿಸ್ಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು – ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ

1 min read

ಸರಿಸ್ಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು – ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೋಮವಾರ ಕಾಡ್ಗಿಚ್ಚು ಸಂಭವಿಸಿದೆ.  ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹತೋಟಿಗೆ ತರಲು ಹರಸಾಹಸವನ್ನೇ ಮಾಡಲಾಗುತ್ತಿದೆ.

ಅಗ್ನಿ ಸುಮಾರು  10 ಚದರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ ಆದರೆ ಅದೃಷ್ಟವಶಾತ್, ಕಾಡಿನಲ್ಲಿರುವ  ಹುಲಿಗಳು ಸುರಕ್ಷಿತವಾಗಿವೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಅರಣ್ಯ ಬೆಂಕಿಗೆ ತುತ್ತಾಗಿದೆ. ಬೆಂಕಿ ನದಿಸಲು ಸರ್ವ ಪ್ರಯತ್ನಗಳ ನಂತರ  ಮಂಗಳವಾರ ಬೆಳಿಗ್ಗೆ ಆಗಮಿಸಿದ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್ ಗಳು  ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ.

ಸರಿಸ್ಕಾ, ಅಲ್ವಾರ್ ಮತ್ತು ದೌಸಾ ಮೂರು ರೇಂಜ್‌ಗಳ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸರಿಸ್ಕಾದಲ್ಲಿರುವ ಜಿಲ್ಲಾ ಅರಣ್ಯಾಧಿಕಾರಿ ಸುದರ್ಶನ್ ಶರ್ಮಾ ಪ್ರಕಾರ, “ನಮ್ಮ ಅರಣ್ಯ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಕಳೆದ ಎರಡು ದಿನಗಳಿಂದ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿದ್ದಾರೆ, ಕಾಳಿಘಾಟಿ ಪ್ರದೇಶದಿಂದ ಶುರುವಾದ ಬೆಂಕಿ  ನಾರಾಂಡಿ ಪ್ರದೇಶದವರೆಗೆ ವ್ಯಾಪಿಸಿದೆ. 9 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣ ಬೆಂಕಿಗೆ ಆಹುತಿಯಾಗಿದೆ.  ಇಲ್ಲಿಯವರೆಗೆ ಸಾಕಷ್ಟು ಹುಲ್ಲು ಮತ್ತು ಸಾಲಾರ್ ಮರಗಳು ಸುಟ್ಟುಹೋಗಿವೆ ಆದರೆ ಬೆಂಕಿಯನ್ನು ನಂದಿಸಿದ ನಂತರವೇ ಇತರ ನಷ್ಟಗಳು ಸ್ಪಷ್ಟವಾಗುತ್ತವೆ ಎಂದಿದ್ದಾರೆ.

ಐಎಎಫ್ ಹೆಲಿಕಾಪ್ಟರ್‌ಗಳು ಸಿಲಿಸೆಧ್ ಸರೋವರದಿಂದ ನೀರನ್ನು ತರುತ್ತಿದ್ದು, ಬೆಂಕಿಯನ್ನು ನಂದಿಸಲು ಈಗಾಗಲೇ 50 ಸಾವಿರ ಲೀಟರ್ ನೀರನ್ನು ಸಿಂಪಡಿಸಲಾಗಿದೆ. ವಿಶೇಷವಾಗಿ ಹುಲಿಗಳಂತಹ ಕಾಡು ಪ್ರಾಣಿಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ನಾವು ಅದನ್ನು ಸಿಂಪಡಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ 27 ಹುಲಿಗಳಿವೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd