UPSC-2015 ಟಾಪರ್ ಟೀನಾ ಡಾಬಿ ಎರಡನೇ ಮದುವೆಗೆ ತಯಾರಿ…

1 min read

UPSC-2015 ಟಾಪರ್ ಟೀನಾ ಡಾಬಿ ಎರಡನೇ ಮದುವೆಗೆ ತಯಾರಿ…

UPSC-2015 ಟಾಪರ್ ಟೀನಾ ದಾಬಿ ಮತ್ತೊಮ್ಮೆ ವೈಯಕ್ತಿಕ ಕಾರಣಕ್ಕೆ  ಸುದ್ದಿಯಾಗುತ್ತಿದ್ದಾರೆ.  ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ಟೀನಾ ದಾಬಿ ಅವರು 28ನೇ ವಯಸ್ಸಿನಲ್ಲಿ ಮತ್ತೊಮ್ಮೆ  ವಿವಾಹವಾಗಲಿದ್ದಾರೆ.  ತಮ್ಮ ಜೀವನದ ಹೊಸ ಸಂಗಾತಿಯಾಗಿ ರಾಜಸ್ಥಾನದ ಐಎಎಸ್ ಅಧಿಕಾರಿಯಾಗಿ ಪ್ರದೀಪ್ ಗವಾಂಡೆ ಅವರನ್ನು ಆಯ್ಕೆ ಮಾಡಿದ್ದಾರೆ.

ಗವಾಂಡೆ ಪ್ರಸ್ತುತ ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯಲ್ಲಿ ನಿರ್ದೇಶಕರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಟೀನಾ ದಾಬಿ ತಮ್ಮ ಹೊಸ ಸಂಗಾತಿಯೊಂದಿಗಿನ  ಅನೇಕ ಚಿತ್ರಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಟೀನಾ ಕಳೆದ ವರ್ಷ ಮೊದಲ ಪತಿ ಅಥರ್ ಅಮೀರ್ ಅವರಿಂದ ವಿಚ್ಛೇದನ ಪಡೆದಿದ್ದರು. ಅಥರ್ ಅವರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು.

ಕಳೆದ ವರ್ಷ ವಿಚ್ಛೇದನ

ಟೀನಾ ದಾಬಿ ಈ ಹಿಂದೆ ತನ್ನದೇ ಬ್ಯಾಚ್‌ನ ಐಎಎಸ್ ಅಧಿಕಾರಿ ಅಥರ್ ಅಮೀರ್ ಅವರನ್ನು 2018 ರಲ್ಲಿ ವಿವಾಹವಾಗಿದ್ದರು.  ನವೆಂಬರ್ 2020 ರಲ್ಲಿ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸುವ ಮೂಲಕ ಟೀನಾ ಮತ್ತು ಅಥರ್ ಪರಸ್ಪರ ಬೇರೆ ಬೇರೆಯಾಗಲು ನಿರ್ಧರಿಸಿದ್ದರು, ನ್ಯಾಯಾಲಯವು ಆಗಸ್ಟ್ 2021 ರಲ್ಲಿ ವಿಚ್ಛೇದನಕ್ಕೆ  ಅನುಮೋದಿಸಿತು.

ಪ್ರದೀಪ್ ಗಾವಂಡೆ ಅವರು 9 ಡಿಸೆಂಬರ್ 1980 ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಅವರು ಟೀನಾ ದಾಬಿಗಿಂತ 13 ವರ್ಷ ದೊಡ್ಡವರು. ಟೀನಾ ದಾಬಿ 9 ನವೆಂಬರ್ 1993 ರಂದು ಜನಿಸಿದರು. ಟೀನಾ 23 ನೇ ವಯಸ್ಸಿನಲ್ಲಿ UPSAC ಗೆ ಅಗ್ರಸ್ಥಾನ ಪಡೆದರು, ಪ್ರದೀಪ್ ಗವಾಂಡೆ IAS ಆಗುವ ಮೊದಲು MBBS ವೈದ್ಯರಾಗಿದ್ದರು. ಅವರು ರಾಜಸ್ಥಾನದ ಹಲವು ಜಿಲ್ಲೆಗಳ ಕಲೆಕ್ಟರ್ ಕೂಡ ಆಗಿದ್ದಾರೆ.

ಲಂಚ ಹಗರಣದಲ್ಲಿ ಪ್ರದೀಪ್ ಗಾವಂಡೆ ಕೂಡ ಆರೋಪಿಯಾಗಿದ್ದಾರೆ. ಆರ್‌ಎಸ್‌ಎಲ್‌ಡಿಸಿಯಲ್ಲಿ ಎಂಡಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಲಂಚ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವೂ ಪ್ರಕರಣ ದಾಖಲಿಸಿತ್ತು. ಇದಲ್ಲದೆ ಎಂಟು ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 2021 ರಲ್ಲಿ ಭ್ರಷ್ಟಾಚಾರ ವಿರೋಧಿ ಬ್ಯೂರೋ ತಂಡವು ಅವರನ್ನು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿತು

ಟೀನಾ ದಾಬಿ ಅವರು 2015 ರಲ್ಲಿ ಐಎಎಸ್‌ ಪರೀಕ್ಷೆಯಲ್ಲಿ   ಮೊದಲ ಸ್ಥಾನ ಪಡೆದು  ಬೆಳಕಿಗೆ ಬಂದರು.  ಸಾಮಾಜಿಕ  ಜಾಲತಾಣದಲ್ಲಿ  1.4 ಮಿಲಿಯನ್ ಮಂದಿ ಇವರನ್ನ ಅನುಸರಿಸುತ್ತಿದ್ದಾರೆ.  ಟೀನಾ ಹುಟ್ಟಿದ್ದು ಭೋಪಾಲ್ (ಮಧ್ಯಪ್ರದೇಶ). ಅವರ ಕುಟುಂಬದ ಮೂಲ ಜೈಪುರ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd