ICC T20 Rankings | ಟಾಪ್ 10 ನಲ್ಲಿಲ್ಲ ಕಿಂಗ್ ಕೊಹ್ಲಿ..!!!
ಟೀಂ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್ ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ ಭಾಗಿ ಜಿಗಿತ ಸಾಧಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ T20 ಸರಣಿಯಲ್ಲಿ, ಶ್ರೇಯಸ್ ಮೂರು ಪಂದ್ಯಗಳಿಗೆ ಒಟ್ಟುಗೂಡಿಸಿ ಮೂರು ಅರ್ಧ ಶತಕಗಳ ಸಹಾಯದಿಂದ 204 ರನ್ ಗಳಿಸಿದ್ದರು.
ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 45ನೇ ಸ್ಥಾನದಲ್ಲಿದ್ದ ಅಯ್ಯರ್ 27 ಸ್ಥಾನ ಮೇಲೇರಿ 18ನೇ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ದೂರವಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರ-10ರ ಪಟ್ಟಿಯಿಂದ ಹೊರಬಿದ್ದಿದ್ದರು.
ಕೊಹ್ಲಿ 612 ಅಂಕಗಳೊಂದಿಗೆ ಐದು ಸ್ಥಾನ ಕುಸಿದು 15ನೇ ಸ್ಥಾನದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿರುವ ಟೀಂ ಇಂಡಿಯಾದ ಏಕೈಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್. ರಾಹುಲ್ 646 ಅಂಕಗಳೊಂದಿಗೆ 10ನೇ ಸ್ಥಾನನೇ ಸ್ಥಾನಪಡೆದಿದ್ದಾರೆ.
ಇನ್ನು ಪಾಕ್ ನಾಯಕ ಬಾಬರ್ ಅಜಮ್ 805 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 798 ಅಂಕಗಳೊಂದಿಗೆ ಎರಡನೇ ಮತ್ತು ಏಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ) 796 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್ ಮಲಾನ್ (ಇಂಗ್ಲೆಂಡ್, 728 ಅಂಕ) ಮತ್ತು ಡೆವೊನ್ ಕಾನ್ವೇ (ನ್ಯೂಜಿಲೆಂಡ್, 703 ಅಂಕ) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಅಗ್ರ ಹತ್ತರೊಳಗೆ ಟೀಂ ಇಂಡಿಯಾದಿಂದ ಯಾರೂ ಇಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಭುವನೇಶ್ವರ್ ಮೂರು ಸ್ಥಾನ ಮೇಲೇರಿ 17ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ತಬ್ರೇಜ್ ಶಾಂಸಿ (784 ಅಂಕ) ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಜೋಶ್ ಹೇಜಲ್ವುಡ್ 752 ಅಂಕಗಳೊಂದಿಗೆ ಮತ್ತು ಆದಿಲ್ ರಶೀದ್ (ಇಂಗ್ಲೆಂಡ್, 746 ಅಂಕ) ನಂತರದ ಸ್ಥಾನದಲ್ಲಿದ್ದಾರೆ. icc-t20-rankings-shreyas-iyer-spot-18th-jumps