ಬಿಗ್ ಬಾಸ್ ಕನ್ನಡ ಸೀಸನ್ 11ರ ಫೈನಲ್ ವಾರಕ್ಕೆ ಮೊದಲ ಸ್ಪರ್ಧಿಯಾಗಿ ಪ್ರವೇಶಿಸಿರುವ ಹನುಮಂತ ಲಮಾಣಿ ತಮ್ಮ ಮದುವೆ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ. ಧನರಾಜ್ ಅವರೊಂದಿಗಿನ ಸಂಭಾಷಣೆಯಲ್ಲಿ, “ಬಿಗ್ ಬಾಸ್ ಟ್ರೋಫಿ ಗೆದ್ದರೆ ನೇರವಾಗಿ ಅತ್ತೆ ಮನೆಗೆ ಹೋಗಿ ಮದುವೆಗೆ ಹುಡುಗಿ ಕೇಳುತ್ತೇನೆ” ಎಂದು ಸಹ ಹೇಳಿದ್ದಾರೆ.
ಇದಕ್ಕೂ ಮುನ್ನ ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದ ಹನುಮಂತ ಅವರ ತಾಯಿ, ತಮ್ಮ ಸೊಸೆ ಮನೆಯ ಸಂಪ್ರದಾಯದಂತೆ ಇರಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.
ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶಿಸಿದ ಹನುಮಂತ, ತಮ್ಮ ಆಟದ ವೈಖರಿಯಿಂದ ಜನಮನ್ನಣೆ ಗಳಿಸಿದ್ದಾರೆ. “ಇಷ್ಟು ದಿನ ಚೆನ್ನಾಗಿ ಆಟ ಆಡಿದ್ದೇನೆ. ಔಟ್ ಆದರೂ ಖುಷಿಯಿಂದ ಹೊರಗೆ ಹೋಗುತ್ತೇನೆ” ಎಂದು ಧನರಾಜ್ ಅವರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಹನುಮಂತ ಅವರ ಗೆಲುವಿನ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದು, ಅವರ ಮದುವೆ ಕನಸು ನನಸಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.








