IIT-bombay student suicide : SIT ಅಫರಾಧ ವಿಭಾಗಕ್ಕೆ ವರ್ಗಾಯಿಸಿದ ಮುಂಬೈ ಪೊಲೀಸರು…
ಫೆಬ್ರವರಿ 12 ರಂದು ಹಾಸ್ಟೆಲ್ ಎಂಟನೇ ಮಹಿಯಿಂದ ಜಿಗಿದು ಸಾವನ್ನಪ್ಪಿದ 18 ವರ್ಷದ ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ ತನಿಖೆಯನ್ನ ಮುಂಬೈ ಅಪರಾಧ ವಿಭಾಗದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವರ್ಗಾಯಿಸಲಾಗಿದೆ.
ಮೃತ ವ್ಯಕ್ತಿಯನ್ನ ದರ್ಶನ್ ಸೋಲಂಕಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಯ ಕುಟುಂಬದವರು ಜಾತಿ ತಾರತಮ್ಯವನ್ನ ಎದುರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ತನಿಖೆಯನ್ನ ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಲಕ್ಷ್ಮೀ ಗೌತಮ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ.
ಫೆಬ್ರವರಿ 12 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದರ್ಶನ್ ಐಐಟಿ-ಬಾಂಬೆ ಹಾಸ್ಟೆಲ್ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದರು. ಅಹಮದಾಬಾದ್ ಮೂಲದ ಈತ ಮೂರೂವರೆ ತಿಂಗಳ ಹಿಂದೆ B Tech ಗೆ ದಾಖಲಾಗಿದ್ದರು.
“ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳು ಇಲ್ಲಿ (ಐಐಟಿ ಬಾಂಬೆ) ವಿವಿಧ ರೂಪಗಳಲ್ಲಿ ತಾರತಮ್ಯವನ್ನ ಎದುರಿಸುತ್ತಿದ್ದಾರೆ. ವಿವಿಧ ರೀತಿಯಲ್ಲಿ ರ್ಯಾಗಿಂಗ್ ಗೆ ಒಳಗಾಗುತ್ತಾರೆ. ನಾವು ಹಿರಿಯರೊಂದಿಗೆ ಮಾತನಾಡಿದಾಗ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
IIT-bombay student suicide: Mumbai police transferred to SIT crime branch…