ದೆಹಲಿ: ಅಕ್ರಮ ಹಣ ವರ್ಗಾವಣೆ (Money laundering) ಆರೋಪದ ಹಿನ್ನೆಲೆಯಲ್ಲಿ ಮೂವರನ್ನು ಜಾರಿ ನಿರ್ದೇಶನಾಲಾಯದ ಅಧಿಕಾರಿಗಳು ಬಂಧಿಸಿದ್ದಾರೆ.
ಮೂವರಲ್ಲಿ ಖಾಸಗಿ ಸಂಸ್ಥೆ ಅಶೋಕ ವಿಶ್ವವಿದ್ಯಾಲಯದ (Ashoka University) ಇಬ್ಬರು ಸಹ ಸಂಸ್ಥಾಪಕರು ಸೇರಿದ್ದಾರೆ ಎನ್ನಲಾಗಿದೆ. ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ, ಚಾರ್ಟರ್ಡ್ ಅಕೌಂಟೆಂಟ್ ಎಸ್‌ಕೆ ಬನ್ಸಾಲ್ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ ಅಥವಾ ಪಿಎಂಎಲ್‌ಎ ಅಡಿಯಲ್ಲಿ ಕೇಂದ್ರೀಯ ಸಂಸ್ಥೆ ಬಂಧಿಸಿದೆ ಎಂದು ತಿಳಿದು ಬಂದಿದೆ.
ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ ಪ್ರಚಾರ ಮಾಡಿದ ಪ್ಯಾರಾಬೋಲಿಕ್ ಡ್ರಗ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಡಿ 17 ಸ್ಥಳ ಶೋಧಿಸಿದ್ದು, 1,600 ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪ್ಯಾರಾಬೋಲಿಕ್ ಡ್ರಗ್ಸ್ ವಿರುದ್ಧ ಆರೋಪ ಹೊರಿಸಿತ್ತು. ಸದ್ಯ ಇಡಿ ತನಿಖೆ ಆರಂಭಿಸಿದೆ.








