IMDB Rating – ಕೆಜಿಎಫ್ 2 ಚಿತ್ರವನ್ನ ಹಿಂದಿಕ್ಕಿದ ಕಮಲ್ ನಟನೆಯ ವಿಕ್ರಮ್…
ಕನ್ನಡ ಮತ್ತು ಭಾರತೀಯ ಚಿತ್ರರಂಗದ ಮಟ್ಟಿಗೆ ಹಲವು ದಾಖಲೆಗಳನ್ನ ಬರೆದ ಸಿನಿಮಾ ಕೆಜಿಎಫ್ ಚಾಪ್ಟರ್ 2. 2022ರಲ್ಲಿ ಬಿಗ್ಗೆಸ್ಟ್ ಹಿಟ್ ಗಳ ಪೈಕಿ ಈ ಸಿನಿಮಾ ಸಹ ಒಂದು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 1200 ಕೋಟಿ ಗಳಿಸಿ ದಾಖಲೆ ಬರೆದಿತ್ತು. IMDB ರೇಟಿಂಗ್ ನಲ್ಲೂ ಚಿತ್ರ ಒಳ್ಳೆಯ ರೇಟಿಂಗ್ ಪಡೆದುಕೊಂಡಿತ್ತು. ಇಂಥಹ ಚಿತ್ರವನ್ನ ಬೇರೊಂದು ಸಿನಿಮಾ ಹಿಂದಿಕ್ಕಿ ದಾಖಲೆ ಬರೆದಿದೆ.
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ IMDB ರೇಟಿಂಗ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನ ಹಿಂದಿಕ್ಕಿ ದಾಖಲೆ ಬರೆದಿದೆ. 8.8 ರೇಟಿಂಗ್ ಪಡೆದು ವಿಕ್ರಮ್ ಮೊದಲ ಸ್ಥಾನದಲ್ಲಿದ್ದರೆ 8.5 ರೇಟಿಂಗ್ ಪಡೆದುಕೊಂಡು ಕೆಜಿಎಫ್ 2 ನೇ ಸ್ಥಾನದಲ್ಲಿದೆ.
ಲೋಕೇಶ್ ಕನಗರಾಜು ನಿರ್ದೇಶನದ ಮಲ್ಟಿವರ್ಸ್ ಸಿನಿಮಾ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹದ್ ಫಾಸಿಲ್ ನಟನೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಸಿನಿಮಾ ಕೊನೆಯಲ್ಲಿ ಬರುವ ರೋಲೆಕ್ಸ್ ಸೂರ್ಯ ಚಿತ್ರದ ಕ್ರೇಜ್ ಹೆಚ್ಚಿಸಿದ್ದರು.
IMDB ಮೂವಿಗಳಿಗೆ ರೇಟಿಂಗ್ ಕೊಡುತ್ತದೆ. ಮೊದಲೆರೆಡು ಸ್ಥಾನದಲ್ಲಿ ವಿಕ್ರಮ್ ಕೆಜಿಎಫ್ ಸಿನಿಮಾಗಳಿದ್ದರೆ ಮೂರನೇ ಸ್ಥಾನದಲ್ಲಿ ದಿ ಕಶ್ಮೀರ್ ಫೈಲ್ಸ್ 8.3 ನಾಲ್ಕನೇ ಸ್ಥಾನದಲ್ಲಿ ಮಲಯಾಳಂ ನ ಹೃದಯಂ 8.1 ಚಿತ್ರವಿದೆ. ಐದನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ RRR 8.0 ಚಿತ್ರವಿದೆ.