ಬೆಂಗಳೂರಿನಲ್ಲಿ ಹಲವರಿಗಂತೂ ಯಾರ ಭಯ ಇಲ್ಲದಂತಾಗಿದೆ. ಪುಡಿ ರೌಡಿಗಳ ಅಟ್ಟಹಾಸವಂತೂ ಮಿತಿ ಮೀರುತ್ತಿದೆ.
ಮಡಿವಾಳ ಪೊಲೀಸ್ (Police) ಠಾಣಾ ವ್ಯಾಪ್ತಿಯ ವೆಂಕಟಾಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪುಡಿರೌಡಿಗಳು ಯುವಕನ ಮೇಲೆ ಬ್ಯಾಟ್, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಮೇಶ್ ಹಲ್ಲೆಗೊಳಗಾದ ಯುವಕ ಎನ್ನಲಾಗಿದೆ.
ರಮೇಶ್ ವೆಂಕಟಾಪುರದಲ್ಲಿ ಸಂಜೆ ವೇಳೆ ಟೀ ಕುಡಿಯಲು ಬಂದಾಗ ಅಲ್ಲಿಗೆ ಬಂದಿದ್ದ, ಕಾವೇರಿ, ಶಿವು ಮತ್ತು ಆತನ ಗ್ಯಾಂಗ್ ನಾವು ಬಂದರೂ ಮೇಲೆ ಎಳಲ್ಲವಾ? ಎಂದು ರಮೇಶ ಮೇಲೆ ಹಲ್ಲೆ ನಡೆಸಿದ್ದಾರೆ. ಮಚ್ಚು, ಲಾಂಗ್ ತೆಗೆದು ಹಲ್ಲೆ ಮಾಡಲು ಬಂದಾಗ, ರಮೇಶ್ ಸ್ಥಳದಿಂದ ಓಡಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ರೌಡಿಗಳು ರಮೇಶ್ನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವುನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.