ತಂಬಾಕು ಸೇವನೆಗೆ ಇರುವ ವಯೋಮಿತಿಯನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ. ತಂಬಾಕು ಸೇವನೆಗೆ ಪ್ರಸ್ತುತ 18 ವರ್ಷದ ವಯೋಮಿತಿ ಇದ್ದು, ಇದನ್ನು 21 ವರ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಸಂಬಂಧ ಇತ್ತೀಚೆಗೆ ಉಪಸಮಿತಿಯು ಸಭೆ ನಡೆಸಿದ್ದು, ಕೆಲವು ಪ್ರಮುಖ ಸಲಹೆಗಳನ್ನು ಪಟ್ಟಿ ಮಾಡಿ ಸಚಿವಾಲಯಕ್ಕೆ ಕಳುಹಿಸಲಾಗಿದೆ. ತಂಬಾಕು ಸೇವನೆಗೆ ವಯೋಮಿತಿಯನ್ನು ಹೆಚ್ಚಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರಿಗೆ ದಂಡದ ಮೊತ್ತವನ್ನು ಹೆಚ್ಚಿಸುವುದು ಮತ್ತು ನಕಲಿ, ಆಕ್ರಮ ಸಿಗರೇಟ್ ಪತ್ತೆಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಸಮಿತಿ ಸಲಹೆ ನೀಡಿದೆ.








