IND vs AUS 3rd Test : ಸ್ವೀಪ್ ಶಾಟ್ ಸಹವಾಸವೇ ಬೇಡ – ತಂತ್ರ ಬದಲಿಸಿದ ಆಸಿಸ್ ಆಟಗಾರರು…..
ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸೀಸ್ ನಡುವಿನ ಮೂರನೆ ಟೆಸ್ಟ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಮಾತ್ರ ಭಾಕಿ ಇವೆ…. ಈಗಾಗಲೇ ಎರಡು ಟೆಸ್ಟ್ ಪಂದ್ಯಗಳನ್ನ ಗೆದ್ದಿರುವ ಪಂದ್ಯ ಗೆದ್ದು ಸರಣಿ ವಶಮಾಡಿಕೊಳ್ಳುವ ತವಕದಲ್ಲಿದೆ. ಮೊದಲೆರಡು ಟೆಸ್ಟ್ಗಳಲ್ಲಿ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ ಅವರ ಅಬ್ಬರದಿಂದಾಗಿ ಆಸೀಸ್ ಬ್ಯಾಟ್ಸ್ಮನ್ಗಳು ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಎರಡನೇ ಟೆಸ್ಟ್ ನಲ್ಲಿ ಸ್ಪಿನ್ನರ್ ಗಳನ್ನ ಎದುರಿಸಿಲು ಆಸಿಸ್ ಬ್ಯಾಟ್ಸ್ಮನ್ ಗಳ ಕಂಡು ಕೊಂಡ ತಂತ್ರ ಮತ್ತೊಮ್ಮೆ ಕೈ ಕೊಟ್ಟಿದೆ.
ಎರಡನೇ ಟೆಸ್ಟ್ನಲ್ಲಿ ಆಸೀಸ್ ಆಟಗಾರರು ಭಾರತದ ಸ್ಪಿನ್ ಬೌಲರ್ಗಳನ್ನ ಸ್ವೀಪ್ ಶಾಟ್ ಗಳ ಮೂಲಕ ಎದುರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೇ ಅದೇ ಹೊಡೆತಗಳಿಂದ ಆರು ಆಸಿಸ್ ಬ್ಯಾಟರ್ ಗಳಿ ಔಟಾಗಿ ಫೆವಿಲಿಯನ್ ಸೇರಿದರು. ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಆಸೀಸ್ ಬ್ಯಾಟ್ಸ್ ಮನ್ ಗಳ ಅನಿರೀಕ್ಷಿತ ಕುಸಿತಕ್ಕೆ ಸ್ವೀಪ್ ಶಾಟ್ ಗಳೇ ಪ್ರಮುಖ ಕಾರಣ. ಇದರಿಂದಾಗಿ ಮಾರ್ಚ್ 1 ರಿಂದ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸ್ವೀಪ್ ಶಾಟ್ ಹಾಗೂ ರಿವರ್ಸ್ ಶಾಟ್ ಆಡದೇ ಇರಲು ನಿರ್ಧರಿಸಿದ್ದಾರಂತೆ. ಇದರೊಂದಿಗೆ ಕಾಂಗರೂಗಳು ಮೂರನೇ ಟೆಸ್ಟ್ ಪಂದ್ಯದಲ್ಲಿ ಮಾರ್ಗ ಬದಲಿಸಲು ಸಜ್ಜಾಗಿದ್ದಾರೆ.
ಟೀಂ ಇಂಡಿಯಾದ ಸ್ಪಿನ್ನರ್ ಅಶ್ವಿನ್ ಮೂರನೇ ಟೆಸ್ಟ್ ಪಂದ್ಯದ ಸ್ಥಳವಾದ ಹೋಳ್ಕರ್ ಸ್ಟೇಡಿಯಂ (ಇಂಧೋರ್) ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಸಮಯದಲ್ಲಿ ಅಶ್ವಿನ್ ಬೌಲಿಂಗ್ ಗೆ ಸ್ವೀಪ್ ಶಾಟ್ ಆಡುವುದು ಮೋಸವಾಗುತ್ತದೆ ಎಂದರಿತ ಆಸಿಸ್ ಆಟಗಾರರು ಸಾಂಪ್ರದಾಯಿಕ ಹೊಡೆತಗಳನ್ನ ಆಡಲಷ್ಟೆ ಮುಂದಾಗಲಿದ್ದಾರೆ ಎನ್ನಲಾಗಿದೆ. ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಸ್ಪಿನ್ನರ್ ಗಳಿಂದಾಗಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಸಾಧ್ಯವಾಗದ ಆಸೀಸ್ ಬ್ಯಾಟ್ಸ್ ಮನ್ ಗಳು.. ಮೂರನೇ ಟೆಸ್ಟ್ ನಲ್ಲಿ ಅವರನ್ನು ಎದುರಿಸುವುದು ಹೇಗೆ..? ಯಾವ ತಂತ್ರದೊಂದಿಗೆ ಕಣಕ್ಕೆ ಇಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
IND vs AUS 3rd Test : March 1st Ind Vs Aus 3rd Test Starting Match In Indore