IND VS ENG 2nd T20: ಅಪರೂಪದ ದಾಖಲೆ ಕಣ್ಣಾಕಿದ ಕೊಹ್ಲಿ – ರೋಹಿತ್ ಶರ್ಮಾ
ಬರ್ಮಿಂಗ್ ಹ್ಯಾಮ್ ವೇದಿಕೆಯಾಗಿ ಇಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾದ ಹಾಲಿ ಮತ್ತು ಮಾಜಿ ನಾಯಕರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಒಂದು ಅಪರೂಪದ ದಾಖಲೆ ಮೇಲೆ ಕಣ್ಣಾಕಿದ್ದಾರೆ.
ಈ ಮ್ಯಾಚ್ ನಲ್ಲಿ ಇವರಿಬ್ಬರು ಇನ್ನೆರಡು ಬೌಂಡರಿಗಳನ್ನು ಬಾರಿಸಿದ್ರೆ ಟಿ 20 ಮಾದರಿಯಲ್ಲಿ 300 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ನಿರ್ಮಿಸಲಿದ್ದಾರೆ. ಪ್ರಸ್ತುತ ಇವರಿಬ್ಬರ ಖಾತೆಯಲ್ಲಿ 298 ಬೌಂಡರಿಗಳಿವೆ.

ಶಾರ್ಟ್ ಫಾರ್ಮೆಟ್ ನಲ್ಲಿ ಮೂನ್ನೂರು ಬೌಂಡರಿ ಬಾರಿಸಿದ ದಾಖಲೆ ಐರ್ಲೆಂಡ್ ಆಟಗಾರರಾದ ಪಾಲ್ ಸ್ಪಿರ್ಲಿಂಗ್ ಹೆಸರಿನಲ್ಲಿದೆ.
ಸ್ಪಿರ್ಲಿಂಗ್ 104 ಟಿ 20 ಕ್ರಿಕೆಟ್ ನಲ್ಲಿ 325 ಬೌಂಡರಿಗಳನ್ನು ಬಾರಿಸಿದ್ದಾರೆ.
ಇದು ಹೀಗಿದ್ದರೇ ಇಂಗ್ಲೆಂಡ್ ಜೊತೆ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ 50 ರನ್ ಗಳಿಂದ ಗೆಲುವು ಕಂಡಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1 – 0 ಅಂತರದ ಮುನ್ನಡೆ ಸಾಧಿಸಿದೆ.