IND Vs ENG Test : ರೋಹಿತ್ ಕೋವಿಡ್ | ಕೊಹ್ಲಿ ಕ್ಯಾಪ್ಟನ್ಸಿ..?
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನಾ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ರ್ಯಾಪಿಡ್ ಯಾಂಟಿಜನ್ ಟೆಸ್ಟ್ ನಲ್ಲಿ ಪಾಸಿಟಿವ್ ಆಗಿದ್ದಾರೆ.
ಹೀಗಾಗಿ ಅವರು ಎರಡು ವಾರಗಳ ಕಾಲ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ.
ಇದೇ ಆದ್ರೆ ಜುಲೈ 1 ರಂದು ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ದೂರವಾಗಲಿದ್ದಾರೆ.
ಒಂದು ವೇಳೆ ರೋಹಿತ್ ಶರ್ಮಾ ಅಲಭ್ಯರಾದ್ರೆ ತಂಡವನ್ನು ಮುನ್ನಡೆಸೋರು ಯಾರು..? ಎಂಬೋದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕೊಹ್ಲಿಗೆ ನಾಯಕತ್ವ..?
ವಾಸ್ತವಕ್ಕೆ ಕ್ಯಾಪ್ಟನ್ ಅಲಭ್ಯರಾದ್ರೆ ವೈಸ್ ಕ್ಯಾಪ್ಟನ್ ತಂಡವನ್ನು ಮುನ್ನಡೆಸುತ್ತಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಎ ರೋಹಿತ್ಶರ್ಮಾ ನಾಯಕರಾದ್ರೆ, ಕೆ.ಎಲ್.ರಾಹುಲ್ ವೈಸ್ ಕ್ಯಾಪ್ಟನ್ ಆಗಿದ್ದರು. ಆದ್ರೆ ರಾಹುಲ್ ಇಂಜೂರಿಯಿಂದಾಗಿ ಸರಣಿಯಿಂದ ದೂರವಾಗಿದ್ದಾರೆ.

ಇದಾದ ಬಳಿಕ ಬಿಸಿಸಿಐ ವೈಸ್ ಕ್ಯಾಪ್ಟನ್ ಯಾರೆಂದು ತಿಳಿಸಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆಗಳು ಇದೆ.
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಸೂಪರ್ ಪ್ರದರ್ಶನ ನೀಡಿತ್ತು. 2-1 ಮುನ್ನಡೆಯಲ್ಲಿ ಟೀಂ ಇಂಡಿಯಾ ಅಧಿಪತ್ಯ ಸಾಧಿಸಿತ್ತು.
ಆದ್ರೆ ಕೊರೊನಾ ಕಾಟದಿಂದ ಸರಣಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗುವ ಸಾಧ್ಯತೆಗಳಿವೆ.
ಆದ್ರೆ ಇದನ್ನ ವಿರಾಟ್ ಕೊಹ್ಲಿ ಅಂಗೀಕರಿಸುತ್ತಾರಾ ಅನ್ನೋದು ಕಾದು ನೋಡಬೇಕು. ಇದು ಆಗಲಿಲ್ಲ ಅಂದ್ರೆ ಪಂತ್ ಗೆ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ.
ಆದ್ರೆ ಇಂಗ್ಲೆಂಡ್ ವಿರುದ್ಧ ಪಂತ್ ಗೆ ಕ್ಯಾಪ್ಟನ್ಸಿ ನೀಡೋದು ದೊಡ್ಡ ರಿಸ್ಕ್ ಆಗಿರುತ್ತದೆ. ಹೀಗಾಗಿ ಅಜಿಂಕ್ಯಾ ರಹಾನೆಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.







