ಭಾರತದ ಟೆಸ್ಟ್ ಗೆಲುವಿಗೆ ಭಾರತ ಮೂಲದವರೆ ಅಡ್ಡಿ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕಾನ್ಪುರ ಟೆಸ್ಟ್ ಪಂದ್ಯ ರೋಚಕ ಡ್ರಾ ನಲ್ಲಿ ಕೊನೆಗೊಂಡಿದೆ. ಕೊನೆಯ ವಿಕೆಟ್ ಪಡೆಯುವಲ್ಲಿ ಟೀಂ ಇಂಡಿಯಾ ವಿಫಲವಾಗಿದ್ದು, ಅಂತಿಮವಾಗಿ ಪಂದ್ಯ ಡ್ರಾ ಗೊಂಡಿತು. ಟೀಂ ಇಂಡಿಯಾ ನ್ಯೂಜಿಲೆಂಡ್‌ಗೆ 284 ರನ್‌ಗಳ ಟಾರ್ಗೆಟ್ ನೀಡಿತ್ತು, ಆದರೆ ಕೊನೆಯ ಎರಡು ಸೆಷನ್‌ಗಳಲ್ಲಿ ಭಾರತದ ಅದ್ಭುತ ಸ್ಪಿನ್ನರ್‌ಗಳ ಮುಂದೆ ಕಿವೀಸ್ ತಂಡ ಉಸಿರುಗಟ್ಟಿದಂತಾಯಿತು.
ಆದರೆ ಕಾನ್ಪುರ ಟೆಸ್ಟ್‌ನ ಕೊನೆಯ ಗಂಟೆಯಲ್ಲಿ ಭಾರತೀಯ ಮೂಲದವರಾದ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮತ್ತು ಎಜಾಜ್ ಪಟೇಲ್ ಕೊನೆಯ ವಿಕೆಟ್ ಬೀಳಲು ಬಿಡದೆ. ನೆಲಕ್ಕಂಟಿ ಆಡಿದರು. ಮೈದಾನದಲ್ಲಿ ಮೋಡ ಕವಿದಿದ್ದರಿಂದ ಬೆಳಕಿನ ಅಡಚಣೆಯುಂಟಾಗುತ್ತಿತ್ತು. ಕೆಟ್ಟ ಬೆಳಕಿನ ನಡುವೆಯೂ ಪಂದ್ಯ ನಡೆಯುತ್ತಿತ್ತು. ಆದರೆ ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಪಂದ್ಯ ಕೊನೆಗಳಲು 12 ರಿಂದ 13 ನಿಮಿಷಗಳಿರುವಾಗ ಅಂಪೈರ್ ಗಳು ಮಂದ ಬೆಳಕಿನ ಕಾರಣ ನೀಡಿ ದಿನದಾಟವನ್ನ ಅಂತ್ಯಗೊಳಿಸಿದರು. ಇದರಿಂದ ಭಾರತ ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯ ರೋಚಕ ಅಂತ್ಯ ಕಂಡಿದೆ.








