IND vs NZ 2nd ODI : 15 ರನ್ ಗೆ 5 ವಿಕೆಟ್- ಸಂಕಷ್ಟಕ್ಕೆ ಸಿಲುಕಿದ ನ್ಯೂಜಿಲೆಂಡ್….
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದೆ.
ಮೊದಲು ಬ್ಯಾಟ್ ಮಾಡುತ್ತಿರುವ ನ್ಯೂಜಿಲೆಂಡ್ 15 ಓವರ್ ಗಳಲ್ಲಿ 5 ವಿಕೆಟ್ ಗೆ 33 ರನ್ ಗಳಿಸಿತು. ಗ್ಲೆನ್ ಫಿಲಿಪ್ಸ್ ಮತ್ತು ಮೈಕಲ್ ಬ್ರೇಸ್‌ವೆಲ್ ಕ್ರೀಸ್‌ನಲ್ಲಿದ್ದಾರೆ.
ಟಾಮ್ ಲ್ಯಾಥಮ್ ಒಂದು ರನ್ ಗಳಿಸಿ ಔಟಾಗಿದ್ದಾರೆ. ಇದಕ್ಕೂ ಮೊದಲು ಡ್ವೇನ್ ಕಾನ್ವೆ 7 ರನ್, ಡೇರಿಲ್ ಮಿಚೆಲ್ 1 ರನ್, ಹೆನ್ರಿ ನಿಕೋಲ್ಸ್ 2 ರನ್ ಮತ್ತು ಫಿನ್ ಅಲೆನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಭಾರತ ತಂಡ ಯಾವುದೇ ಬದಲಾವಣೆ ಮಾಡದೇ ಆಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ಆಡಿದ ಎಲ್ಲಾ ಆಟಗಾರರು ಎರಡನೇ ಏಕದಿನ ಪಂದ್ಯದಲ್ಲೂ ಆಡುತ್ತಿದ್ದಾರೆ.
ಮೂರು ಪಂದ್ಯಗಳ ಸರಣಿಯ ಅಂಗವಾಗಿ ಈಗಾಗಲೇ ಒಂದು ಏಕದಿನ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾ ಇಂದಿನ ಏಕದಿನ ಪಂದ್ಯದಲ್ಲೂ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ.
ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡ – ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಇದ್ದಾರೆ.
ನ್ಯೂಜಿಲೆಂಡ್ ತಂಡ – ಟಾಮ್ ಲ್ಯಾಥಮ್, ಫಿನ್ ಅಲೆನ್, ಕಾನ್ವೆ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಬ್ರೇಸ್ ವೆಲ್, ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಫರ್ಗುಸನ್, ಬ್ಲೇರ್ ಥಿಕೆನರ್ ಇದ್ದಾರೆ. IND vs NZ 2nd ODI
IND vs NZ 2nd ODI : 5 wickets for 15 runs- New Zealand in trouble….








