IND vs NZ 3rd T20 : ಭಾರತ ವಿರುದ್ಧ ಅನಗತ್ಯ ದಾಖಲೆ ಬರೆದ ನ್ಯೂಜಿಲೆಂಡ್…
ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಟಿ20 ಸರಣಿಯನ್ನು ಸೋಲುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಏಕದಿನ ಮತ್ತು ಟಿ20 ಸರಣಿಯನ್ನು ಸೋತು ಬರಿಗೈಯಲ್ಲಿ ತವರಿಗೆ ಹಿಂತಿರುಗಿದೆ. ಮೂರನೆ ಟಿ20 ಪಂದ್ಯವನ್ನು ಮಿಚೆಲ್ ಸ್ಯಾಂಟ್ನರ್ ಪಡೆ ಸೋಲುವ ಮೂಲಕ ಅನಗತ್ಯ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದೆ.
235 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 66 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಟಿ20ಯಲ್ಲಿ ಭಾರತ ವಿರುದ್ಧ ಅತಿ ಕಡಿಮೆ ಮೊತ್ತ ದಾಖಲಿಸಿದ ತಂಡವೆಂಬ ಹಣೆಪಟ್ಟಿಗೆ ಗುರಿಯಾಗಿದೆ.
ಭಾರತ ವಿರುದ್ಧ ಟಿ 20ಯಲ್ಲಿ ಕಡಿಮೆ ಮೊತ್ತ ದಾಖಲಿಸಿದ ತಂಡಗಳ ವಿವರ ಇಲ್ಲಿದೆ.
2018ರಲ್ಲಿ ಡಬ್ಲಿನ್ನಲ್ಲಿ ಆತಿಥೇಯ ಐರ್ಲೆಂಡ್ ಟೀಮ್ ಇಂಡಿಯಾ ವಿರುದ್ಧ 70 ರನ್ ಕಲೆ ಹಾಕಿತ್ತು.
2012ರಲ್ಲಿ ಕೊಲೊಂಬೊದಲ್ಲಿ ಇಂಗ್ಲೆಂಡ್ ಕೇವಲ 80 ರನ್ ಕಲೆ ಹಾಕಿತ್ತು.
2016ರಲ್ಲಿ ಮೀರ್ಪುರ್ನಲ್ಲಿ ಯುಎಇ ತಂಡ 9 ವಿಕೆಟ್ ನಷ್ಟಕ್ಕೆ 81 ರನ್ ಪೇರಿಸಿತ್ತು.
2016ರಲ್ಲಿ ವಿಶಾಖಪಟ್ಟಣದಲ್ಲಿ ಶ್ರೀಲಂಕಾ 82 ರನ್ ಕಲೆ ಹಾಕಿತ್ತು.
IND vs NZ 3rd T20 : New Zealand sets unnecessary record against India…








