IND Vs NZ: ಟೀಂ ಇಂಡಿಯಾದಲ್ಲಿ ಮೂರು ಹೊಸ ಮುಖಗಳು
ಮುಂಬೈ : ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. ನಿರೀಕ್ಷೆಯಂತೆ ರೋಹಿತ್ ಶರ್ಮಾಗೆ ನಾಯಕತ್ವ ಒಲಿದುಬಂದಿದೆ. ಕೆ.ಎಲ್.ರಾಹುಲ್ ಉಪನಾಯಕರಾಗಿದ್ದಾರೆ.
ಟೀಂ ಇಂಡಿಯಾದಲ್ಲಿ ಮೂರು ಹೊಸ ಮುಖಗಳು
ಬಿಸಿಸಿಐ ಬಿಗ್ ಬಾಸ್ ಈ ಬಾರಿ ಮೂರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದ ವೆಂಕಟೇಶ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್), ಹರ್ಷಲ್ ಪಟೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಅವೇಶ್ ಖಾನ್ (ದೆಹಲಿ ಕ್ಯಾಪಿಟಲ್ಸ್) ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಧ್ಯಪ್ರದೇಶದ 26 ವರ್ಷದ ವೆಂಕಟೇಶ್ ಅಯ್ಯರ್ ಈ ಬಾರಿಯ ಐಪಿಎಲ್ ನಲ್ಲಿ 370 ರನ್ ಹಾಗೂ ಮೂರು ವಿಕೆಟ್ ಪಡೆದಿದ್ದಾರೆ.ದೇಸಿ ಕ್ರಿಕೆಟ್ನಲ್ಲಿ ಹರಿಯಾಣ ಪರ ಆಡುತ್ತಿರುವ ಗುಜರಾತ್ನ 30 ವರ್ಷದ ಹರ್ಷಲ್ ಪಟೇಲ್ ಐಪಿಎಲ್ನಲ್ಲಿ 32 ವಿಕೆಟ್ ಪಡೆದು ‘ಪರ್ಪಲ್ ಕ್ಯಾಪ್’ ಗೆದ್ದುಕೊಂಡರು. ಮಧ್ಯಪ್ರದೇಶದ 24 ವರ್ಷದ ಅವೇಶ್ ಖಾನ್ 24 ವಿಕೆಟ್ ಪಡೆದು ಐಪಿಎಲ್ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ನಲ್ಲಿ 635 ರನ್ ಗಳಿಸಿದ್ದ ಮಹಾರಾಷ್ಟ್ರದ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ಇಶಾಂತ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯಜ್ವೀರ್, ಯಜ್ವೀರ್ ಅವೇಶ್ ಖಾನ್, ಭುವನೇಶ್ವರ್, ದೀಪಕ್ ಚಹಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಭಾರತ, ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ
ನವೆಂಬರ್ 17: ಮೊದಲ ಪಂದ್ಯ (ಜೈಪುರದಲ್ಲಿ)
ನವೆಂಬರ್ 19: ಎರಡನೇ ಪಂದ್ಯ (ರಾಂಚಿಯಲ್ಲಿ)
ನವೆಂಬರ್ 21: ಮೂರನೇ ಪಂದ್ಯ (ಕೋಲ್ಕತ್ತಾದಲ್ಲಿ)