ಆಫ್ರಿಕಾದ ಆ ಪಿಚ್ ನಲ್ಲಿ ಭಾರತ ಸೋಲೇಕಂಡಿಲ್ಲ..
ಸೆಂಚುರಿಯನ್ನಿಂದ ಜೋಹಾನ್ಸ್ಬರ್ಗ್ಗೆ ಕೇವಲ 41 ಕಿಲೋಮೀಟರ್ ದೂರ, ಆದರೆ… ಈ ಪಯಣದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಸಿಕ್ಕ ಯಶಸ್ಸಿಗೆ ಬೆಲೆಕಟ್ಟಲಾಗದು.
ಡಿಸೆಂಬರ್ 30ರವರೆಗೆ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಕೊಹ್ಲಿ ಸೇನೆ ಗೆದ್ದುಕೊಂಡಿದ್ದು, ಏಷ್ಯಾದ ಯಾವ ತಂಡವೂ ಸಾಧಿಸದ ಸಾಧನೆ ಮಾಡಿದೆ.
ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇದೀಗ ಎರಡನೇ ಟೆಸ್ಟ್ ಗಾಗಿ ವಾಂಡರರ್ಸ್ಗೆ ಪಯಣಿಸಿದೆ ಭಾರತ. ಈ ಮೈದಾನದಲ್ಲಿ ಈವರೆಗೂ ಟೀಂ ಇಂಡಿಯಾ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ.
ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಜನವರಿ 3 ರಂದು ಆರಂಭವಾಗಲಿದೆ.
ಜೋಹಾನ್ಸ್ಬರ್ಗ್ನಲ್ಲಿರುವ ದಾಖಲೆಯನ್ನು ಟೀಂ ಇಂಡಿಯಾ ಉಳಿಸಿಕೊಂಡರೆ ಹೊಸದೊಂದು ಸೃಷ್ಟಿಯಾಗುವುದು ಖಚಿತ.
ಸಫಾರಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.
ವಾಂಡರರ್ಸ್ ನಲ್ಲಿ ಟೀಂ ಇಂಡಿಯಾ ಟೆಸ್ಟ್ ದಾಖಲೆ!
ಭಾರತ ಈ ಮೈದಾನದಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿದೆ. 2 ಟೆಸ್ಟ್ ಗಳನ್ನು ಗೆದ್ದು.. ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಈ ಪಿಚ್ ನಲ್ಲಿ ಈಗಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇಬ್ಬರಿಗೂ ಈ ಮೈದಾನ ಲಕ್ಕಿ ಪಿಚ್ ಆಗಿದೆ.
1997ರ ಸರಣಿಯ ಭಾಗವಾಗಿ ದ್ರಾವಿಡ್ ಇಲ್ಲಿ 148 ರನ್ ಗಳಿಸಿ ಮಿಂಚಿದ್ದರು. ಅವರು ಟೀಂ ಇಂಡಿಯಾದ ನಾಯಕರಾಗಿದ್ದಾಗ 2006 ರಲ್ಲಿ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಗೆದ್ದಿದ್ದರು. ಈ ಪಂದ್ಯವನ್ನು ಭಾರತ 123 ರನ್ಗಳಿಂದ ಗೆದ್ದುಕೊಂಡಿತು.
ವಿರಾಟ್ ಕೊಹ್ಲಿಗೂ ಈ ಮೈದಾನ ಅದೃಷ್ಠದ ಪಿಚ್ ಆಗಿದ್ದು, ನಾಯಕನಾಗಿ 2018 ರಲ್ಲಿ ಸೌತ್ ಆಫ್ರಿಕಾ ತಂಡವನ್ನು ಮೊದಲ ಬಾರಿಗೆ ಸೋಲಿಸಿದ್ದರು.
”ಮೊದಲ ಟೆಸ್ಟ್ ಗೆದ್ದು, ಉತ್ಸಾಹದಲ್ಲಿರುವ ಕೊಹ್ಲಿ ಸೇನೆ ವಾಂಡರರ್ಸ್ನಲ್ಲಿ ಹೆಚ್ಚಿನ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯುವುದರಲ್ಲಿ ಸಂದೇಹವಿಲ್ಲ.