ind-vs-sa-3rd-t20i | ಮೂರನೇ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ
ಮೊದಲೆರಡು ಟಿ 20 ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾ ಇದೀಗ ತೀವ್ರ ಒತ್ತಡಕ್ಕೆ ಸಿಲುಕಿದೆ.
ದೆಹಲಿ, ಕಟಕ್ ಪಂದ್ಯಗಳಲ್ಲಿನ ಸೋಲು ಟೀಂ ಇಂಡಿಯಾಗೆ ಮರ್ಮಾಘಾತ ನೀಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ವಿಶಾಖಪಟ್ಟಣದ ವೈ ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಮೂರನೇ ಟಿ 20 ಪಂದ್ಯ ನಡೆಯಲಿದೆ.
ಈ ಪಂದ್ಯ ಟೀಮ್ ಇಂಡಿಯಾದ ಪಾಲಿಗೆ ಒಂದು ರೀತಿಯಲ್ಲಿ ಮಾಡು ಇಲ್ಲವೆ ಮಡಿ ಇದ್ದ ಹಾಗೇ.
ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೇ ಸರಣಿ ದಕ್ಷಿಣ ಆಫ್ರಿಕಾ ತಂಡದ ಪಾಲಾಗಲಿದೆ.
ಹೀಗಾಗಿ ಯಂಗ್ ಇಂಡಿಯಾ ಕಂ ಬ್ಯಾಕ್ ಮಾಡಲೇ ಬೇಕಿದೆ.
ಇಂದಿನ ಪಂದ್ಯದಲ್ಲಿ ಗೆಲ್ಲಲು ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆಗಳಾಗುವ ಸಾಧ್ಯತೆಗಳಿವೆ.

ಟೀಂ ಇಂಡಿಯಾದ ಸ್ಪೆಷಲಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿದ್ದಾರೆ.
ಹೀಗಾಗಿ ಅವರನ್ನು ಮೂರನೇ ಪಂದ್ಯದಿಂದ ಕೈ ಬಿಡುವ ಸಾಧ್ಯತೆಗಳಿವೆ. ಚಹಾಲ್ ಬದಲಿಗೆ ಮತ್ತೊಬ್ಬ ಯುವ ಸ್ಪಿನ್ನರ್ ರವಿ ಬಿಷ್ಣೋಯ್ನಿಗೆ ಅವಕಾಶ ಸಿಗಬಹುದು.
ಮತ್ತೊಂದು ಕಡೆ ವೇಗಿ ಆವೇಶ್ ಖಾನ್ ಕೂಡ ಮೂರನೇ ಪಂದ್ಯದಲ್ಲಿ ಬೆಂಚ್ ಗೆ ಸೀಮಿತವಾಗುವ ಅವಕಾಶಗಳಿವೆ.
ಅವರ ಬದಲಿಗೆ ಉಮ್ರಾನ್ ಮಲಿಕ್ ಅಥವಾ ಅರ್ಷದೀಪ್ ಸಿಂಗ್ ಗೆ ಅವಕಾಶ ಸಿಗಬಹುದು.
ಇದಲ್ಲದೇ ಅಕ್ಷರ್ ಪಟೇಲ್ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿಲ್ಲ.
ಹೀಗಾಗಿ ಅವರ ಬದಲಿಗೆ ದೀಪಕ್ ಹೂಡಗೆ ಅವಕಾಶ ನೀಡಬಹುದು.
ಸಂಭಾವ್ಯ ತಂಡ
ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಹರ್ಷಲ್ ಪಟೇಲ್, ಭುನವೇಶ್ವರ್ ಕುಮಾರ್, ರವಿ ಬಿಷ್ಣೋಯ್ನಿ, ಅರ್ಷದೀಪ್ ಸಿಂಗ್ ind-vs-sa-3rd-t20i-india-predicted-xi 143548-2