IND vs SA TEST MATCH | ರಿಷಬ್ ಪಂತ್ ಅರ್ಧಶತಕ.. ಭಾರತ 130 ರನ್ ಗಳಿಗೆ 4 ವಿಕೆಟ್
ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
70 ರನ್ ಗಳ ಮುನ್ನಡೆಯೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ದಕ್ಷಿಣ ಆಫ್ರಿಕಾ ಬೌಲರ್ ಗಳು ಶಾಕ್ ನೀಡಿದರು. 9 ರನ್ ಗಳಿಸಿದ್ದ ಚೇತೇಶ್ವರ್ ಪೂಜಾರ ಬಂದ ದಾರಿಯಲ್ಲಿಯೇ ವಾಪಸ್ ಆದರು. ಇದಾದ ಬಳಿಕ ಬಂದ ಅಜಿಂಕ್ಯಾ ರಹಾನೆ ಕೂಡ ವಿರಾಟ್ ಜೊತೆ ನಿಲ್ಲಲಿಲ್ಲ. ಕೇವಲ 1 ರನ್ ಗಳಿಸಿ ಪೇವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿದ ರಿಷಬ್ ಪಂತ್, ನಾಯಕನ ಮಾರ್ಗದರ್ಶನದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಒಂದು ಕಡೆ ವಿರಾಟ್ ದಕ್ಷಿಣ ಆಫ್ರಿಕಾ ಬೌಲರ್ ಗಳ ತಾಳ್ಮೆ ಪರೀಕ್ಷೆ ಮಾಡುತ್ತಿದ್ದರೇ ರಿಷಬ್ ಪಂತ್, ಬೌಲರ್ ಗಳನ್ನು ಬೌಂಡರಿಗಳ ಮೂಲಕ ದಂಡಿಸುತ್ತಿದ್ದಾರೆ.
ಊಟದ ವಿರಾಮಕ್ಕೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದೆ. ಆ ಮೂಲಕ 143 ರನ್ ಗಳ ಲೀಡ್ ಸಾಧಿಸಿದೆ. 127 ಎಸೆತಗಳನ್ನು ಎದುರಿಸಿರುವ ವಿರಾಟ್ ಕೊಹ್ಲಿ, 28 ರನ್ ಗಳಿಸಿದ್ದಾರೆ. 60 ಎಸೆತಗಳನ್ನು ಎದುರಿಸಿರುವ ಪಂತ್ 51 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.