ಸೆಂಚೂರಿ ಮಿಸ್ ಆದ್ರೂ ದಾಖಲೆ ಮಿಸ್ ಆಗಲಿಲ್ಲ..
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 223 ರನ್ ಗಳಿಗೆ ಆಲೌಟ್ ಆಗಿದೆ.
ನಾಯಕ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟದ ಫಲವಾಗಿ ಟೀಂ ಇಂಡಿಯಾ ಇನ್ನೂರರ ಗಡಿದಾಟಿದೆ.
ಅಸಲಿಗೆ ವಿರಾಟ್ ಅವರ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿತ್ತು. ಮಂಗಳವಾರ ಆಫ್ರಿಕಾ ನೆಲದಲ್ಲಿ ಹಿಂದೆಂದೂ ನೋಡಿರದ ವಿರಾಟ್ ಕೊಹ್ಲಿಯ ದರ್ಶನವಾಯಿತು.
ಸದಾ 50ರ ಸರಾಸರಿಯಲ್ಲಿ ಬ್ಯಾಟ್ ಬೀಸುವ ವಿರಾಟ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಪಂದ್ಯದಲ್ಲಿ 21 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದರು.
ತಮ್ಮ ಇನ್ನಿಂಗ್ಸ್ ನಲ್ಲಿ 201 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 79 ರನ್ ಗಳನ್ನು ಸಿಡಿಸಿದರು. ಇದರಲ್ಲಿ 12 ಬೌಂಡರಿಗಳು ಒಂದು ಸಿಕ್ಸರ್ ಇದೆ.
ವಿರಾಟ್ ಕೊಹ್ಲಿ ಈ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು, ಈ ಬಾರಿ ವಿರಾಟ್ ಸೆಂಚೂರಿ ಬಾರಿಸಿಯೇ ತೀರುತ್ತಾರೆ ಎಂದು ಭಾವಿಸಿದ್ದರು. ಆದ್ರೆ ಆ ನಿರೀಕ್ಷೆ ಹುಸಿಯಾಯ್ತು.
ಟೀಂ ಇಂಡಿಯಾ 33 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಾಗ ಕ್ರೀಸ್ ಗೆ ಬಂದ ವಿರಾಟ್, ಅತ್ಯಂತ ಎಚ್ಚರಿಕೆಯಲ್ಲಿ ಇನ್ನಿಂಗ್ಸ್ ಕಟ್ಟಿದರು.
ಅನವಶ್ಯಕ ಹೊಡೆತಕ್ಕೆ ಕೈ ಹಾಕದೇ ಸಾವಧಾನವಾಗಿ ರನ್ ಗಳಿಸಿದ್ರು. ಇನ್ನೇನು ವಿರಾಟ್ ಶತಕ ಬಾರಿಸುತ್ತಾರೆ ಅನ್ನುಷ್ಟರಲ್ಲಿ ರಬಾಡ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಈ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಬಾರಿಸದೇ ಇದ್ದರೂ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಬರೆದುಕೊಂಡರು.
ದಕ್ಷಿಣ ಆಫ್ರಿಕಾ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾದ ಬ್ಯಾಟರ್ ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಆ ಮೂಲಕ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆ ಮುರಿದರು.
ದಕ್ಷಿಣ ಆಫ್ರಿಕಾ ನೆಲದಲ್ಲಿ ದ್ರಾವಿಡ್, 11 ಟೆಸ್ಟ್ನಲ್ಲಿ 624 ರನ್ ಗಳಿಸಿದ್ದರು. ಪ್ರಸಕ್ತ ಪಂದ್ಯಗಳಲ್ಲಿ ವಿರಾಟ್ 14 ರನ್ ಗಳಿಸುವ ಮೂಲಕ ಆ ದಾಖಲೆ ಮುರಿದರು.
ಇನ್ನು ಈ ಪಟ್ಟಿಯಲ್ಲಿ ದಿಗ್ಗಜ ಬ್ಯಾಟರ್ ಸಚಿನ್ ಟೆಂಡೂಲ್ಕರ್ (15 ಪಂದ್ಯಗಳಲ್ಲಿ 1161 ರನ್ ಗಳೊಂದಿಗೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.
ಇತ್ತ ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ 7 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 50ರ ಸರಾಸರಿಯಲ್ಲಿ 626* ರನ್ ಗಳಿಸಿದ್ದಾರೆ. ಇದರಲ್ಲಿ 2 ಸೆಂಚರಿಗಳು, 2 ಅರ್ಧ ಸೆಂಚರಿಗಳು ಇವೆ.