IND vs WI : ವಿಶ್ವದಾಖಲೆ ಮೇಲೆ ಟೀಂ ಇಂಡಿಯಾ ಕಣ್ಣು
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.
ಪೋರ್ಟ್ ಆಫ್ ಸ್ಪೇಯಿನ್ ವೇದಿಕೆಯಾಗಿ ಇಂದು ಎರಡನೇ ಏಕದಿನ ಪಂದ್ಯ ನಡೆಯಲಿದೆ.
ಈಗಾಗಲೇ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಪ್ಲಾನ್ ನಲ್ಲಿದೆ.
ಇತ್ತ ಮೊದಲ ಪಂದ್ಯದಲ್ಲಿ ಸೋತಿರುವ ವೆಸ್ಟ್ ಇಂಡೀಸ್ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ತವಕದಲ್ಲಿದೆ.
ಈ ನಡುವೆ ಎರಡನೇ ಪಂದ್ಯಕ್ಕೂ ಮುನ್ನಾ ಟೀಂ ಇಂಡಿಯಾ ಅಪರೂಪದ ದಾಖಲೆ ಮೇಲೆ ಕಣ್ಣಾಕಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದ್ರೆ ಸರಣಿ ಗೆಲ್ಲಲಿದೆ.
ಇದರೊಂದಿಗೆ ಒಂದೇ ತಂಡದ ವಿರುದ್ಧ ಸತತ ಅತ್ಯಧಿಕ ದ್ವಿಪಕ್ಷೀಯ ಏಕದಿನ ಸರಣಿಗಳನ್ನು ಗೆದ್ದ ತಂಡವಾಗಿ ಟೀಂ ಇಂಡಿಯಾ ದಾಖಲೆ ಬರೆಯಲಿದೆ.
ಅಲ್ಲದೇ ಈಗಾಗಲೇ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಮೇಲೆ ಸತತವಾಗಿ 11 ಏಕದಿನ ಸರಣಿಗಳನ್ನು ಗೆದ್ದುಕೊಂಡಿದೆ.

ಮತ್ತೊಂದು ಕಡೆ ಪಾಕಿಸ್ತಾನ್ ತಂಡ ಜಿಂಬಾಬೆ ವಿರುದ್ಧ ಸತತ 11 ಏಕದಿನ ಸರಣಿಗಳಲ್ಲಿ ಜಯ ಸಾಧಿಸಿದೆ.
ಹೀಗಾಗಿ ಭಾರತ ತಂಡ ಇಂದಿನ ಪಂದ್ಯದಲ್ಲಿ ಗೆದ್ದರೇ 12 ಸರಣಿಗಳೊಂದಿಗೆ ಪಾಕಿಸ್ತಾನ್ ತಂಡವನ್ನು ಹಿಂದಿಕ್ಕಲಿದೆ.
ಸಂಭಾವ್ಯ ಪ್ಲೇಯಿಂಗ್ 11
ಭಾರತ : ಶಿಖರ್ ಧವನ್, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್, ಯುಜವೇಂದ್ರ ಚಹಾಲ್, ಮೊಹ್ಮದ್ ಸಿರಾಜ್, ಆವೇಶ್ ಖಾನ್
ಇತ್ತ ಮೊದಲ ಪಂದ್ಯದಲ್ಲಿ ಸೋತಿರುವ ವೆಸ್ಟ್ ಇಂಡೀಸ್ ತಂಡ ಗಾಯಗೊಂಡ ಹುಲಿಯಂತಾಗಿದೆ. ಇಂದಿನ ಪಂದ್ಯದಲ್ಲಿ ಗೆಲುವೊಂದೇ ಮೂಲ ಮಂತ್ರವಾಗಿ ಕಣಕ್ಕಿಳಿಯಲಿದೆ.
ವೆಸ್ಟ್ ಇಂಡೀಸ್ ಲೈಕ್ಲಿ ಇಲೆವೆನ್
ನಿಕೋಲಸ್ ಪೂರನ್, ಶಾಯ್ ಹಾಪ್ (ವೈಸ್ ನಾಯಕ), ಶಮರ್ ಬ್ರೂಕ್ಸ್, ಅಕೇಲ್ ಹೊಸೆನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ರೋವ್‌ಮನ್ ಪಾವೆಲ್, ಜೇಡನ್ ಸೀಲ್ಸ್, ರೊಮಾರಿಯೋ ಶೆಪರ್ಡ್








