ಭಾರತ 400 ಬಿಲಿಯನ್ ಡಾಲರ್ ಸರಕು ರಫ್ತು ಗುರಿ ಸಾಧಿಸಿದೆ – ಪ್ರಧಾನಿ
ಭಾರತವು ತನ್ನ ಅತ್ಯಧಿಕ ಸರಕು ರಫ್ತು ಗುರಿಯಾದ 400 ಶತಕೋಟಿ US ಡಾಲರ್ಗಳನ್ನು ಇಂದು ಸಾಧಿಸುವ ಮೂಲಕ ಇತಿಹಾಸವನ್ನು ಬರೆದಿದೆ.
ನಿಗದಿತ ಸಮಯಕ್ಕಿಂತ ಒಂಬತ್ತು ದಿನ ಮುಂಚಿತವಾಗಿ ಈ ಗುರಿ ಸಾಧಿಸಲಾಗಿದೆ. ಭಾರತವು 400 ಶತಕೋಟಿ ಡಾಲರ್ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಯಶಸ್ಸಿಗಾಗಿ ದೇಶದ ರೈತರು, ನೇಕಾರರು, ಎಂಎಸ್ಎಂಇಗಳು, ತಯಾರಕರು ಮತ್ತು ರಫ್ತುದಾರರನ್ನು ಅವರು ಅಭಿನಂದಿಸಿದರು. ಇದು ಆತ್ಮನಿರ್ಭರ ಭಾರತ ಯಾತ್ರೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಪ್ರಧಾನಿ ಹೇಳಿದರು.
India achieves highest ever goods export target of 400 billion US dollar: PM Modi