India-Australia : ಗಿಲ್ ಅರ್ಧಶತಕ ಮೊದಲ ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿರುವ ಭಾರತ…
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ – ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೂರನೇ ದಿನದ ಮೊದಲ ಸೆಷನ್ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಕ್ರೀಸ್‌ನಲ್ಲಿದ್ದಾರೆ.
ಗಿಲ್ ತಮ್ಮ ವೃತ್ತಿಜೀವನದ 5 ನೇ ಅರ್ಧಶತಕವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಪೂಜಾರ ಆಸ್ಟ್ರೇಲಿಯಾ ವಿರುದ್ಧ 2000 ರನ್ ಪೂರೈಸಿದ ಸಾಧನೆ ಮಾಡಿದ್ದು, ಈ ಸಾಧನೆ ಮಾಡಿದ ನಾಲ್ಕನೆ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿ ಮ್ಯಾಥ್ಯೂ ಕುಹ್ನೆಮನ್ ಬೌಲಿಂಗ್ ನಲ್ಲಿ ಮಾರ್ನಸ್ ಲಬುಶೆನ್ ಅವರಿಗೆ ಕ್ಯಾಚಿತ್ತು ಔಟ್ ಆಗಿದ್ದಾರೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 480 ರನ್‌ಗಳಿಗೆ ಆಲೌಟ್ ಆಗಿತ್ತು. ಖವಾಜಾ 180 ರನ್ ಗಳಿಸಿ ಔಟಾದರೆ, ಗ್ರೀನ್ 114 ರನ್ ಗಳಿಸಿ ಬೃಹತ್ ಮೊತ್ತವನ್ನ ಪೇರಿಸಿದ್ದಾರೆ.
India-Australia: Gill’s half-century India has scored 107 runs for the loss of the first wicket…