ನವದೆಹಲಿ: ಭಾರತಕ್ಕೆ ಬಾಂಗ್ಲಾದೇಶದಂತಹ ಸ್ಥಿತಿ ಬರಲು ಸಾಧ್ಯವೇ ಇಲ್ಲ. ಇದು ಮೋದಿ ಅವರ ಭಾರತ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಜೋಧ್ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಯಾವುತ್ತೂ ಅಂತಹ ಸ್ಥಿತಿ ಬರುವುದಿಲ್ಲ ಎಂದಿದ್ದಾರೆ. ಬಾಂಗ್ಲಾದೇಶದಲ್ಲಿ (Bangladesh) ನಡೆದಂತೆ ಭಾರತದಲ್ಲಿಯೂ (India) ಮುಂದೊಂದು ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸಕ್ಕೆ ಜನರು ನುಗ್ಗುತ್ತಾರೆ ಎಂಬ ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ (Madhya Pradesh Congress leader Sajjan Verma) ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನೇ ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಆದರೆ, ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಸಚಿವರು,ಹಲವರು ಈ ರೀತಿ ಕಮೆಂಟ್ ಮಾಡುತ್ತಿರುವುದು ದುರ್ದೈವ. ಆದರೆ, ಭಾರತದಲ್ಲಿ ಅಂತಹ ಸ್ಥಿತಿ ಎಂದಿಗೂ ಬರುವುದಿಲ್ಲ. ಬಾಂಗ್ಲಾದೇಶದಲ್ಲಿ ನಡೆದಿರುವುದು ಅನಿರೀಕ್ಷಿತವಲ್ಲ. ಅಲ್ಲಿನ ಪರಿಸ್ಥಿ ಕುರಿತು ಭಾರತ ಕಣ್ಣಿಟ್ಟಿದೆ. ಆದರೆ,ಮೋದಿ ಅವರ ಭಾರತದಲ್ಲಿ ಮಾತ್ರ ಇಂತಹ ಘಟನೆ ನಡೆಯಲೂ ಸಾಧ್ಯವೇ ಇಲ್ಲ ಎಂದು ಉಚ್ಛರಿಸಿದ್ದಾರೆ.