ಮೋದಿ ನಾಯಕತ್ವದಲ್ಲಿ ಪಾಕ್‌ ಗೆ ತಕ್ಕ ಪಾಠ : ಅಮೆರಿಕ ಬೇಹುಗಾರಿಕೆ ವರದಿ

1 min read

ಮೋದಿ ನಾಯಕತ್ವದಲ್ಲಿ ಪಾಕ್‌ ಗೆ ತಕ್ಕ ಪಾಠ : ಅಮೆರಿಕ ಬೇಹುಗಾರಿಕೆ ವರದಿ

ಅಮೆರಿಕಾ : ಪಾಕಿಸ್ತಾನದ ಪ್ರಚೋದನಾಕಾರಿ ದಾಳಿಗಳಿಗೆ ಭಾರತ ಈಗ ಹಿಂದಿಗಿಂತಲೂ ಮಿಲಿಟರಿ ಪಡೆಯೊಂದಿಗೆ ಬಲವಾದ ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಬೇಹುಗಾರಿಕೆ ವರದಿ ತಿಳಿಸಿದೆ.

ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ ಕಚೇರಿಯ  ವಾರ್ಷಿಕ ಬೆದರಿಕೆ ಪರಿಶೀಲನಾ ವರದಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಈ ವರದಿಯನ್ನು ಸಂಸತ್‌ ಗೆ ಸಲ್ಲಿಸಲಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಈಗ ಹಿಂದಿಗಿಂತಲೂ ಪಾಕಿಸ್ತಾನದ ಪ್ರಚೋದನಾ ದಾಳಿಗಳಿಗೆ ತಕ್ಕ ತಿರುಗೇಟು ನೀಡಲಿದೆ. ಪ್ರತಿ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ವರದಿ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳು ಕಡಿಮೆ. ಆದರೆ, ಉಭಯ ದೇಶಗಳ ನಡುವೆ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನದ ಜತೆ ಸಂಬಂಧ ಬೆಳೆಸಲು ಭಯೋತ್ಪಾದನೆ ಮತ್ತು ಹಿಂಸಾಚಾರ ಮುಕ್ತ ವಾತಾವರಣ ಮೊದಲು ಸೃಷ್ಟಿಯಾಗಬೇಕು. ಇಂತಹ ವಾತಾವಾರಣ ಕಲ್ಪಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಹೇಳಿದೆ.

BIGGBOSS 8 : ದಿವ್ಯಾ  – ಅರವಿಂದ್ ಲವ್ ಸ್ಟೋರಿಗೆ ಬಿಗ್ ಬಾಸ್ ಟಾಸ್ಕ್ ಗಳೇ ಸೇತುವೆ..!  

‘ಯುವರತ್ನ’ ಬಳಿಕ ‘ಹೊಂಬಾಳೆ’ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡ್ತಿದ್ದಾರೆ ಅಪ್ಪು..!

ಕನ್ನಡ ಕಲಿಯುತ್ತೇನೆ… ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟ  ಮಂಗ್ಲಿ..!

ಭಾರತದಲ್ಲಿರುವುದು ಕೇವಲ 5.5 ದಿನಗಳಿಗಾಗುವಷ್ಟು ಲಸಿಕೆ ಸಂಗ್ರಹ ಮಾತ್ರ

ಎಮ್.ಎಸ್. ಧೋನಿ.. ಕ್ರಿಕೆಟಿಗನಲ್ಲ.. ಈಗ ಪಕ್ಕಾ ಬಿಸಿನೆಸ್ ಮೆನ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd