ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನ ಮೊದಲ ದಿನದಾಟದ ಮುಕ್ತಾಯವಾಗಿದ್ದು, ಭಾರತ ತಂಡವು 1 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿದೆ.
ಅಜೇಯ 76 ರನ್ ಕಲೆಹಾಕಿರುವ ಆರಂಭಿಕ ಯಶಸ್ವಿ ಜೈಸ್ಬಾಲ್ ( Yashasvi Jaiswal) ಹಾಗೂ ಅಜೇಯ 14 ರನ್ ಸಿಡಿಸಿರುವ ಶುಭ್ಮನ್ ಗಿಲ್ (Shubman Gill) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ವಿಕೆಟ್ ಕಳೆದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ದಿನದ ಮೂರನೇ ಸೆಷನ್ನಲ್ಲಿ 246 ರನ್ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಆದರೆ, ಉಳಿದ ಬ್ಯಾಟ್ಸಮನ್ ಗಳು ಸಾಥ್ ನೀಡದ ಹಿನ್ನೆಲೆಯಲ್ಲಿ ಕಡಿಮೆ ರನ್ ಸೇರಿಸಿತು. ಭಾರತದ ಸ್ಪಿನ್ ದಾಳಿಯ ಇಂಗ್ಲೆಂಡ್ ಆಟಗಾರರು ತತ್ತರಿಸಿ ಹೋದರು.
ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ತಲಾ 3 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ತಲಾ ವಿಕೆಟ್ ಪಡೆದರು. ಹೀಗಾಗಿ ಮೊದಲ ದಿನವೇ ಬ್ಯಾಟಿಂಗ್ ಗೆ ಇಳಿದ ಭಾರತ ತಂಡವು ದಿನದಾಟದಂತ್ಯಕ್ಕೆ 23 ಓವರ್ ಬ್ಯಾಟಿಂಗ್ ಮಾಡಿ 119 ರನ್ ಕಲೆಹಾಕಿತು. ಭರ್ಜರಿ ಆಟ ಪ್ರದರ್ಶಸಿದ ಜೈಸ್ವಾಲ್ 70 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 76 ರನ್ ಕಲೆಹಾಕಿದ್ದಾರೆ.