India Tour ಏಳು ವರ್ಷಗಳ ಬಳಿಕ ಬಾಂಗ್ಲಾ ಪ್ರವಾಸಕ್ಕೆ ಟೀಂ ಇಂಡಿಯಾ
ಈ ವರ್ಷ ಡಿಸೆಂಬರ್ ನಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.
ಈ ಪ್ರವಾಸದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ತಂಡದ ವಿರುದ್ಧ ಮೂರು ಏಕದಿನ, ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.
ಭಾರತ ಪ್ರವಾಸಕ್ಕೆ ಸಂಬಂಧಸಿದ ಶೆಡ್ಯೂಲ್ ಅನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಗುರುವಾರ ಪ್ರಕಟಿಸಿದೆ.
ಡಿಸೆಂಬರ್ ನಾಲ್ಕು ರಂದು ಢಾಕಾ ವೇದಿಕೆಯಾಗಿ ಮೊದಲ ಏಕದಿನ ಪಂದ್ಯದೊಂದಿಗೆ ಭಾರತ ಟೂರ್ ಆರಂಭವಾಗಲಿದೆ.
ಢಾಕಾದಲ್ಲಿಯೇ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ನಡೆಯಲಿದೆ.
ಆ ನಂತರ ಡಿಸೆಂಬರ್ 14 ರಂದು ಚಟೋಗ್ರಾಮ್ ವೇದಿಕಯಾಗಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಡಿಸೆಂಬರ್ 22 ರಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಭಾರತ ಕ್ರಿಕೆಟ್ ತಂಡ ಸುಮಾರು ಏಳು ವರ್ಷಗಳ ಬಳಿಕ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗಲಿದೆ.
2015ರಲ್ಲಿ ಟೀಂ ಇಂಡಿಯಾ ಕೊನೆಯದಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು.