ಇಂಡೋ-ಪಾಕ್ ಮ್ಯಾಚ್ | ಜಾಹೀರಾತಿಗೆ ಭಾರಿ ಡಿಮ್ಯಾಂಡು
ದುಬೈ : ಕ್ರಿಕೆಟ್ ಜಗತ್ತಿನ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಗುದ್ದಾಟಕ್ಕೆ ವಿಶ್ವಕಪ್ ವೇದಿಕೆ ಸಜ್ಜಾಗಿದೆ.
ರಣ ರೋಚಕ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಅಭಿಮಾನಿಗಳ ಜಗತ್ತೇ ಕಾದುಕುಳಿತಿದೆ. ಹೀಗಾಗಿ ಈ ಪಂದ್ಯದ ಮಧ್ಯೆ ಜಾಹೀರಾತು ನೀಡಲು ವಿವಿಧ ಕಂಪನಿಗಳು ನಾ ಮುಂದು ತಾ ಮುಂದು ಅಂತ ಮುಂದೆ ಬರುತ್ತಿವೆ.
ಹೀಗಾಗಿ ಪಂದ್ಯದ ನೇರ ಪ್ರಸಾರ ಮಾಡುತ್ತಿರುವ ಖಾಸಗಿ ವಾಹಿನಿ ಜಾಹೀರಾತಿನಲ್ಲಿ ಹಣದ ಹೊಳೆ ನಿರೀಕ್ಷಿಸಿದೆ.
ಪಂದ್ಯ ನಡೆಯುತ್ತಿರುವಾಗ 10 ಸೆಕೆಂಡ್ ನ ಜಾಹೀರಾತು ದರ ಬರೋಬ್ಬರಿ 30 ಲಕ್ಷ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.
ಇದು ನಿಜವೇ ಆಗಿದ್ದರೇ ಭಾರತದ ವಾಹಿನಿಯೊಂದು ಅತಿಹೆಚ್ಚು ಮೊತ್ತಕ್ಕೆ ಜಾಹೀರಾತು ಮಾರಾಟ ಮಾಡಿ ದಾಖಲೆ ಬರೆಯುವ ಸಾಧ್ಯತೆ ಇದೆ.
ಕೇವಲ ಇಂಡೋ-ಪಾಕ್ ಪಂದ್ಯಕ್ಕೆ ಮಾತ್ರವಲ್ಲದೇ ಭಾರತ ಆಡಲಿರುವ ಎಲ್ಲಾ ಪಂದ್ಯಗಳ 10 ಸೆಕೆಂಡ್ ಜಾಹೀರಾತಿಗೆ 9 ರಿಂದ 10 ಲಕ್ಷ ರೂ. ನಿಗದಿ ಮಾಡಲಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ಜಾಹೀರಾತು ಸ್ಲಾಟ್ ಕೂಡ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.