SLvsIND 1st Test : ಟೀಂ ಇಂಡಿಯಾ ಬ್ಯಾಟರ್ ಗಳ ಅಬ್ಬರ.. ಭಾರತ 357/ 6
ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಗೌರವವನ್ನು ಟೀಂ ಇಂಡಿಯಾ ಪಡೆದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 357 ರನ್ ಗಳಿಸಿದೆ.
45 ರನ್ ಗಳಿಸಿರುವ ರವೀಂದ್ರ ಜಡೇಜಾ, 10 ರನ್ ಗಳಿಸಿರುವ ಅಶ್ವಿನ್ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ದಿನದ ಮೊದಲ ಸೆಷನ್ನಲ್ಲಿ ರೋಹಿತ್ ( 29) ಮತ್ತು ಮಯಾಂಕ್(33) ಅಬ್ಬರದ ಅಟ ಆಡಿದರು.
ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ 52 ರನ್ಗಳ ಜೊತೆಯಾಟ ಕಟ್ಟಿದರು. 6 ಫೋರ್ ಬಾರಿಸಿ 29 ರನ್ಗಳಿಸಿದ್ದ ರೋಹಿತ್ ಲಹಿರು ಕುಮಾರ ಎಸೆತದಲ್ಲಿ ಔಟಾದರು.
33 ರನ್ಗಳಿಸಿದ್ದ ಅಗರ್ವಾಲ್ ಎಂಬುಲ್ಡೆನಿಯಾ ಎಸೆತದಲ್ಲಿ ಔಟಾದರು. ಭಾರತ ಲಂಚ್ಗೆ ಮುನ್ನ 2 ವಿಕೆಟ್ ಕಳೆದುಕೊಂಡು 109 ರನ್ಗಳಿಸಿತ್ತು.
ಊಟದ ಬಳಿಕ ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ಆಟ ಮುಂದುವರೆಯಿತು. ಈ ಹಂತದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 8 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಇನ್ನೇನು ವಿರಾಟ್ ಸೆಟ್ ಆಗಿದ್ದಾರೆ, 100ನೇ ಪಂದ್ಯದಲ್ಲಿ ಶತಕ ಬಾರಿಸ್ತಾರೆ ಅನ್ನೋಷ್ಟರಲ್ಲಿ 45 ರನ್ಗಳಿಸಿದ್ದಾಗ ಔಟಾದರು.
ಅರ್ಧಶತಕ ದಾಖಲಿಸಿ ಮುನ್ನಡೆಯುತ್ತಿದ್ದ ವಿಹಾರಿ 58 ರನ್ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ ಕೊಡುಗೆ 27 ರನ್ಗಳು ಮಾತ್ರ.
ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ಲಂಕಾ ಲೆಕ್ಕಾಚಾರವನ್ನೇ ಬದಲಸಿತು. 6ನೇ ವಿಕೆಟ್ಗೆ ಈ ಜೋಡಿ ಸಿಡಿಲಬ್ಬರ್ ವೇಗದಲ್ಲಿ 104 ರನ್ಗಳಿಸಿತು.
ಬೀಡು ಬೀಸಿನ ಆಟವಾಡಿದ ಪಂತ್ ಕೇವಲ 97 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 96 ರನ್ಗಳಿಸಿ ಔಟಾದರು.
ದಿನದ ಕೊನೆಯಲ್ಲಿ ರವೀಂದ್ರ ಜಡೇಜಾ 45 ಮತ್ತು ಅಶ್ವಿನ್ 10 ರನ್ಗಳಿಸಿ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಭಾರತ 6 ವಿಕೆಟ್ ಕಳೆದುಕೊಂಡು 353 ರನ್ಗಳಿಸಿದೆ. India vs Sri Lanka Highlights 1st Test Day 1