ಕಮಲ್ ಹಾಸನ್ ಗೆ ಕೋವಿಡ್ ಸೋಂಕು – ಚೆನೈನಲ್ಲಿ ಚಿಕಿತ್ಸೆ
ದಕ್ಷಿಣ ಭಾರತದ ಖ್ಯಾತ ನಟ, ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕೋವಿಡ್ ಸೋಂಕು ಧೃಡಪಟ್ಟಿದ್ದು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕಾದಲ್ಲಿ ತಮ್ಮ ಒಡೆತನದ ‘ಕಮಲ್ಸ್ ಹೌಸ್ ಆಫ್ ಖದ್ದರ್’ ಎಂಬ ಜವಳಿ ಮಳಿಗೆಯನ್ನ ಉದ್ಘಾಟಿಸಿ ಚೆನೈಗೆ ವಾಪಸ್ ಆಗಿದ್ದ ಕಮಲ್ ಹಾಸನ್ ಅವರಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಪರೀಕ್ಷೆಗೆ ಒಳಪಟ್ಟ ನಂತರ ಕೋವಿಡ್ ಪಾಸಿಟೀವ್ ಇರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ಕಮಲ್ ಹಾಸನ್ “ನಾನು ಅಮೆರಿಕಾದಿಂದ ಹಿಂದಿರುಗಿದ ನಂತರ ನನಗೆ ಸ್ವಲ್ಪ ಕೆಮ್ಮು ಇತ್ತು. ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಪಾಸಿಟೀವ್ ದೃಢಪಟ್ಟಿದೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಕ್ವಾರಂಟೈನ್ ನಲ್ಲಿದ್ದೇನೆ. ಕೋವಿಡ್ ಇನ್ನೂ ದೂರ ಹೋಗಿಲ್ಲ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಮತ್ತು ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.