ಹವಾಮಾನ ನಿರೋಧಕ ಬೆಳೆ ಉತ್ಪಾದನೆಗೆ ಕೇಂದ್ರ ಸ್ಥಾಪನೆ – ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ…
ಹವಾಮಾನ – ನಿರೋಧಕ ಬೆಳೆ ಉತ್ಪಾದನೆಗೆ ಆಧುನಿಕ ಸಂರಕ್ಷಿತ ಬೆಳೆ ವ್ಯವಸ್ಥೆಗಳ ಕೇಂದ್ರ ಸ್ಥಾಪಿಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮುಂದಾಗಿದೆ.
ಬೆಂಗಳೂರಿನಲ್ಲಿಂದು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಕ್ಯಾಲಿಕಟ್ ನ ಭಾರತೀಯ ಮಸಾಲೆ ಬೆಳೆಗಳ ಸಂಶೋಧನಾ ಸಂಸ್ಥೆಗಳ ಮುಖ್ಯಸ್ಥರು ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಐಐಎಚ್ ಆರ್ ನಿರ್ದೇಶಕಿ ಡಾ.ದೇಬಿ ಶರ್ಮಾ ಮಾತನಾಡಿ ಬೆಳೆ ಉತ್ಪಾದನೆಯ ಮೇಲೆ ಬದಲಾಗುತ್ತಿರುವ ಹವಾಮಾನದ ಪರಿಣಾಮ ಬಗೆಹರಿಸಲು ನೂತನ ಕೇಂದ್ರ ಸ್ಥಾಪಿಸಲಾಗುತ್ತಿದೆ. ಕಡಿಮೆ ವೆಚ್ಚ ಹಾಗೂ ಕಡಿಮೆ ಸ್ಥಳದಲ್ಲಿ ಬೆಳೆಯಬಹುದಾದ ಹಣ್ಣುಗಳು ಮತ್ತು ಹೂವುಗಳನ್ನು ಬೆಳೆಯುವ ವ್ಯವಸ್ಥೆಯನ್ನು ಸಂಸ್ಥೆ ಅಳವಡಿಸಿಕೊಳ್ಳಲಿದೆ. ನೂತನ ವಿಧಾನದ ಮೂಲಕ ಆರಂಭದಲ್ಲಿ ಸ್ಟ್ರಾಬೆರಿ ಹಣ್ಣುಗಳನ್ನು ಬೆಳೆಯಲಾಗುವುದು ಎಂದು ಡಿ ಡಿ ನ್ಯೂಸ್ ಜೊತೆ ಮಾಹಿತ ಹಂಚಿಕೊಂಡಿದ್ದಾರೆ.
ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದ ಉಪಕುಲಪತಿ ಬಾರ್ನೆ ಗ್ಲೋವರ್ ಮಾತನಾಡಿ ಹವಾಮಾನ ಬದಲಾವಣೆ ಆಹಾರ ಭದ್ರತೆ ಹಾಗೂ ಕೃಷಿ ಜೀವನೋಪಾಯಕ್ಕೆ ಅಪಾಯ ಉಂಟುಮಾಡಲಿದೆ. ಹೀಗಾಗಿ, ಉತ್ಪಾದನೆಗೆ ಹೊಸ ವಿಧಾನಗಳ ಅಳವಡಿಕೆ ಅಗತ್ಯವಿದೆ ಎಂದು ಹೇಳಿದರು.
Establishment of Center for Climate Resilient Crop Production – Indian Horticultural Research Institute…