ಭಾರತೀಯ ನೌಕದಳಕ್ಕೆ ಸೇರ್ಪಡೆಯಾದ ವೇಲಾ ಜಲಾಂತರ್ಗಾಮಿ

1 min read

ಭಾರತೀಯ ನೌಕದಳಕ್ಕೆ ಸೇರ್ಪಡೆಯಾದ ವೇಲಾ ಜಲಾಂತರ್ಗಾಮಿ

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಅವರು ಭಾರತೀಯ ನೌಕಾಪಡೆಯ P75 ವೆಲಾ ಹೆಸರಿನ ನಾಲ್ಕನೇ ಸಬ್ ಮೆರಿನ್ ನೌಕಾ ನೌಕಾನೆಲೆಯಲ್ಲಿ ಅನಾವರಣಗೊಳಿಸಿದರು. ಕಳೆದ  ಭಾನುವಾರ ಐಎನ್‌ಎಸ್ ವಿಶಾಖಪಟ್ಟಣಂ ಹೆಸರಿನ ಯದ್ದನೌಕೆ ಕಾರ್ಯಾರಂಭ ಮಾಡಿದ ನಂತರ ಭಾರತೀಯ ನೌಕಾಪಡೆಗೆ ಇದು ಎರಡನೇ ಸೇರ್ಪಡೆಯಾಗಿದೆ.

ಪ್ರಾಜೆಕ್ಟ್ 75 ಎಂದರೇನು?

IK ಗುಜ್ರಾಲ್ ಸರ್ಕಾರದ ಸಮಯದಲ್ಲಿ 25 ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ನಿರ್ಧರಿಸಲಾಗಿತ್ತು. P 75 ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು 30 ವರ್ಷಗಳ ಕಾಲ ಯೋಜನೆ ಹಾಕಿಕೊಳ್ಳಲಾಗಿತ್ತು. 2005 ರಲ್ಲಿ ಭಾರತ ಮತ್ತು ಫ್ರಾನ್ಸ್ ಸರ್ಕಾರಳು 3.75 ಬಿಲಿಯನ್ ಒಪ್ಪಂದವನ್ನ ಮಾಡಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದ್ದವು.

INS Vela  submarine Karambir Singh saakshaatv

ಭಾರತದ  ಮಜಗಾಂವ್ ಡಾಕ್ಸ್ ಲಿಮಿಟೆಡ್, ಮತ್ತು ಫ್ರೆಂಚ್ DCNS ಕಂಪನಿಗಳು ಸೇರಿ  ನೇವಲ್ ಗ್ರೂಪ್ ನ ಅಡಿಯಲ್ಲಿ ಸ್ಕಾರ್ಪಿಯನ್ ಜಲಾಂತರ್ಗಾಮಿಗಳನ್ನ ನಿರ್ಮಿಸುತ್ತಿವೆ. ಆದರೆ ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಪ್ರೆಂಚ್ ಸರ್ಕಾರ ನಕರಾತ್ಮಕ ನಿಲುವು ತಳೆದಿದದ್ದರಿಂದ  ಪ್ರಾಜೆಕ್ಟ್ ವಿಳಂಬವಾಗಿತ್ತು.

ಇಲ್ಲಿಯವರೆಗಿನ ಪ್ರಗತಿ ಏನು?

ಐಎನ್ ಎಸ್ ಕಲ್ವರಿ, INS ಖಂಡೇರಿ ಮತ್ತು INS ಕರಂಜ್ ಸಬ್ ಮೆರಿನ್ ಗಳು ಈಗಾಗಲೆ ಕಾರ್ಯಾರಂಭಗೊಳಿಸಿವೆ. ವೇಲಾ ನಾಲ್ಕನೆಯದು, ಮತ್ತು ವಾಗಿರ್‌ ಜಲಾಂತರ್ಗಾಮಿಯನ್ನ ಸಮುದ್ರದಲ್ಲಿ  ಪರೀಕ್ಷೆ ನಡೆಸಲಾಗುತ್ತಿದೆ. ಆರನೇ, ವಾಗ್ಶೀರ್ ನೌಕೆ ಈಗ ನಿರ್ಮಾಣ ಹಂತದಲ್ಲಿದೆ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd