ತಾಯಿ ಮಗುವಿಗಾಗಿ ಪ್ರತ್ಯೇಕ ಸೀಟು ಪರಿಚಯಿಸಿದ ಭಾರತೀಯ ರೈಲ್ವೇ
ಭಾರತೀಯ ರೈಲ್ವೇ ಇಲಾಖೆ ರೈಲಿನಲ್ಲಿ ನವಜಾತ ಶಿಶುಗಳಿಗಾಗಿ ಪ್ರತ್ಯೇಕ ಸೀಟುಗಳನ್ನು ಪರಿಚಯಿಸಿದೆ. ಈ ಸೌಲಭ್ಯವನ್ನು ಲಕ್ನೋ-ನವದೆಹಲಿ ಮೇಲ್ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಉತ್ತರ ರೈಲ್ವೆ ಆರಂಭಿಸಿದೆ.
ಈಗಾಗಲೇ ಮಹಿಳೆಯರಿಗೆ ಮೀಸಲಿಟ್ಟ ಲೋವರ್ ಬರ್ತ್ ಗಳನ್ನು ಬೇಬಿ ಬರ್ತ್ ಗಳ ಪಕ್ಕದಲ್ಲಿ ಇರಿಸಲಾಗಿದ್ದು, ಇದರಿಂದ ಚಿಕ್ಕ ಮಕ್ಕಳು ತಮ್ಮ ತಾಯಿಯೊಂದಿಗೆ ಯಾವುದೇ ಅನಾನುಕೂಲತೆ ಇಲ್ಲದೆ ಪ್ರಯಾಣಿಸಬಹುದು. ರೈಲಿನ ಎಸಿ ಕೋಚ್ನಲ್ಲಿ ಎರಡು ಬರ್ತ್ಗಳ ಜೊತೆಗೆ ಬೇಬಿ ಬರ್ತ್ ಅನ್ನು ಪರಿಚಯಿಸಲಾಗಿದೆ. ಮಗುವಿನ ಬರ್ತ್ಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಉತ್ತರ ರೈಲ್ವೇಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ಅವರು ಮಾತನಾಡಿ ಜನರಿಂದ ಪ್ರತಿಕ್ರಿಯೆ ಪಡೆದ ನಂತರ ಸೌಲಭ್ಯವನ್ನು ಇತರ ರೈಲುಗಳಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದಲ್ಲದೇ ರೈಲ್ವೆ ಇಲಾಖೆ ಹೊಸ ಮಾರ್ಗ ಸೂಚಿ ಹೊರಡಿಸಿದ್ದು, ರಾತ್ರಿ ಪ್ರಯಾಣದ ವೇಳೆ ಜೋರಾಗಿ ಮಾತನಾಡುವುದು ಮತ್ತು ಮತ್ತು ಸ್ಪೀಕರ್ ಮೂಲಕ ಹಾಡು ಕೇಳುವುದನ್ನ ನಿಷೇಧಿಸಲಾಗಿದೆ, ಪ್ರಯಾಣಿಕರಿಗೆ ಆರಾಮದಾಯಕ ನಿದ್ರೆ ಹೊಂದಲು ಮತ್ತು ಕಿರಿಕಿರಿಯನ್ನ ತಪ್ಪಿಸಲು ರೈಲ್ವೆ ಹೊಸ ಮಾರ್ಗ ಸೂಚಿ ಹೊರಡಿಸಿದೆ.