ಹಸಿವು, ಬಾಯರಿಕೆ, -3 ಡಿಗ್ರಿ ಚಳಿಯೊಂದಿಗೆ ಹೋರಾಡುತ್ತಿರುವ ಭಾರತೀಯರು…
ಉಕ್ರೇನ್ನಿಂದ ಮನೆಗೆ ಮರಳಲು ಯತ್ನಿಸುತ್ತ ಪೋಲೆಂಡ್ ಗಡಿಗೆ ಆಗಮಿಸಿರುವ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಈಗ ಹಸಿವು ಮತ್ತು ಬಾಯಾರಿಕೆ ಒದ್ದಾಡುತ್ತಿದ್ದಾರೆ. ಹೆಪ್ಪುಗಟ್ಟುವ ಚಳಿಯೊಂದಿಗೆ ಹೋರಾಡುತ್ತಿದ್ದಾರೆ.
30 ಕಿ.ಮೀ ನಡೆದು ಗಡಿ ತಲುಪಿರುವ ವಿದ್ಯಾರ್ಥಿಗಳು ಕಳೆದ 24 ಗಂಟೆಗಳಿಂದ ಪೋಲೆಂಡ್ ಪ್ರವೇಶಿಸಲು ಕಾಯುತ್ತಿದ್ದಾರೆ. ಅವರನ್ನು ಇಲ್ಲಿ ಗಡಿ ದಾಟದಂತೆ ತಡೆಯಲಾಗಿದೆ. ಪೋಲೆಂಡ್ ಮತ್ತು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಸೂಚನೆಗಳಲ್ಲಿನ ವ್ಯಾತ್ಯಾಸದಿಂದಾಗಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ರಷ್ಯಾದ ಬಾಂಬ್ ದಾಳಿಯಿಂದ ಬದುಕುಳಿದಿರುವ ವಿದ್ಯಾರ್ಥಿಗಳು ಮೈನಸ್ ಮೂರು ಡಿಗ್ರಿ ಚಳಿಯಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸೆಲ್ಫಿ ವೀಡಿಯೊ ಹಂಚಿಕೊಳ್ಳುವ ಮೂಲಕ ಸಹಾಯಕ್ಕಾಗಿ ಭಾರತ ಸರ್ಕಾರವನ್ನು ವಿನಂತಿಸುತ್ತಿದ್ದಾರೆ. ಭಾರತದ ರಾಯಭಾರಿ ಕಚೇರಿಯ ವಾರ್ಸಾ (ಪೋಲೆಂಡ್) ಪತ್ರವನ್ನು ನಂಬಿ ಗಡಿ ತಲುಪಿದ ವಿದ್ಯಾರ್ಥಿಗಳು ಈಗ ಅಲ್ಲಿಗೆ ಸಿಲುಕಿಕೊಂಡಿದ್ದಾರೆ.