ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ (Asian Games) 8ನೇ ದಿನವೂ ಭಾರತೀಯರ ಪದಕ ಬೇಟೆ ಮುಂದುವರೆದಿದೆ. 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸೇಬಲ್ (Avinash Sable) ದಾಖಲೆಯ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.
ಈ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮತ್ತು ಸ್ಟೀಪಲ್ ಚೇಸ್ (Steeplechase) ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬ ಖ್ಯಾತಿಗೂ ಅವಿನಾಶ್ ಸೇಬಲ್ (29) ಕಾರಣರಾಗಿದ್ದಾರೆ.
8:19:50 ಸೆಕೆಂಡುಗಳಲ್ಲಿ 3,000 ಮೀಟರ್ ಗುರಿ ತಲುಪುವ ಮೂಲಕ ಅವಿನಾಶ್ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 2018ರ ಜಕಾರ್ತಾ ಗೇಮ್ಸ್ನಲ್ಲಿ ಇರಾನ್ನ ಹುಸೇನ್ ಕೀಹಾನಿ 8:22.79 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಏಷ್ಯನ್ ಗೇಮ್ಸ್ ನ ದಾಖಲೆಯಾಗಿತ್ತು. ಹುಸೇನ್ ಹೆಸರಿನಲ್ಲಿದ್ದ ದಾಖಲೆಯನ್ನು ಅವಿನಾಶ್ ಮುರಿದು ಸಾಧನೆ ಮಾಡಿದ್ದಾರೆ