ಭಾರತ ದೇಶದ ಅತ್ಯಂತ ಕ್ಲೀನ್ ಸಿಟಿ ಯಾವುದು ಗೊತ್ತಾ ..?

1 min read

ಭಾರತ ದೇಶದ ಅತ್ಯಂತ ಕ್ಲೀನ್ ಸಿಟಿ ಗೌರವಕ್ಕೆ ಪಾತ್ರವಾದ  ‘ಇಂದೋರ್’

ಆರನೇ ಭಾರಿಗೆ ಕೇಂದ್ರ ಸರ್ಕಾರ ನಡೆಸಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಸತತ ಐದನೇ ಬಾರಿಗೆ ಮಧ್ಯಪ್ರದೇಶದ ಇಂದೋರ್, “ಭಾರತದ ಸ್ವಚ್ಛ ನಗರ” ಎಂದು ಸ್ಥಾನ ಪಡೆದಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶನಿವಾರ ‘ಸ್ವಚ್ಛ ಸರ್ವೇಕ್ಷಣ್ 2021’ ಪ್ರಶಸ್ತಿಗಳನ್ನು ಪ್ರಧಾನ ಮಾಡಿದರು. ಇಂದೋರ್ ನಗರವು ಸತತ ಐದನೇ ಬಾರಿ ಭಾರತದ ಸ್ವಚ್ಛ ನಗರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ 2021 ರ ಫಲಿತಾಂಶದಲ್ಲಿ  ಇಂದೋರ್ 6,000 ರಲ್ಲಿ ಗರಿಷ್ಠ 5,618.14 ಅಂಕಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಗುಜರಾತ್‌ನ ಸೂರತ್ 5,559.21 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸತತ ಐದನೇ ಬಾರಿಗೆ ಇಂದೋರ್ ಅತ್ಯಂತ ಸ್ವಚ್ಛ ನಗರ ಎಂಬ ಘೋಷಣೆಯಾದ ತಕ್ಷಣ ಇಂದೋರ್‌ನಾದ್ಯಂತ ಸಂಭ್ರಮಾಚರಣೆಗಳು ಪ್ರಾರಂಭವಾದವು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd