INDvAUS : ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ ನಡೆಯಲಿದೆ ಜಡ್ಡು – ಅಶ್ವಿನ್ ಕಮಾಲ್…
ಆಲ್ರೌಂಡರ್ ಗಳಾದ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಟೆಸ್ಟ್ ನಲ್ಲಿ ಈ ಜೋಡಿ ಈ ಹಿಂದೆ ಮಾಡಿದ ಮೋಡಿ ಅಷ್ಟಿಷ್ಟಲ್ಲ .
ಧೋನಿ ನಾಯಕತ್ವದಲ್ಲಿ ಈ ಜೋಡಿ ಸ್ಪಿನ್ ಮ್ಯಾಜಿಕ್ ಮಾಡಿದೆ. ಈ ಜೋಡಿ ವಿಶ್ವದ ಘಟಾನುಘಟಿ ಬ್ಯಾಟ್ಸ್ ಮನ್ಗಳನ್ನು ನಲುಗಿಸಿದೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಅಗತ್ಯ ಸಂದರ್ಭದಲ್ಲಿ ಕಮಾಲ್ ಮಾಡಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಈ ಜೋಡಿ ಮಾಡಿದ ಸಾಧನೆ ಇಲ್ಲಿದೆ.
2012- 13 ಕೇರಂ ಸ್ಪಿನ್ನರ್ ಆರ್.ಅಶ್ವಿನ್ 8 ಇನ್ನಿಂಗ್ಸ್ ಗಳಿಂದ 29 ವಿಕಟ್ ಪಡೆದಿದ್ದಾರೆ. 20.1 ಎವರೇಜ್ 49.9 ಸ್ಟ್ರೇರೇಟ್ ಹೊಂದಿದ್ದರು. ರವೀಂದ್ರ ಜಡೇಜಾ 8 ಇನ್ನಿಂಗ್ಸ್ ಗಳಿಂದ 24 ವಿಕೆಟ್ ಪಡೆದು 17.45 ಎವರೇಜ್, 48.3 ಸ್ಟ್ರೈಕ್ ರೇಟ್ ಹೊಂದಿದ್ದರು. 2016-17ರಲ್ಲಿ ಅಶ್ವಿನ್ 8 ಇನ್ನಿಂಗ್ಸ್ ಗಳಿಂದ 21 ವಿಕೆಟ್, 27.38 ಎವರೇಜ್ 64.3 ಸ್ಟ್ರೈಕ್ ರೇಟ್ ಪಡೆದಿದ್ದರು. ರವೀಂದ್ರ ಜಡೇಜಾ 8 ಇನ್ನಿಂಗ್ಸ್ ಗಳಿಂದ 25 ವಿಕೆಟ್ ಪಡೆದಿದ್ದರು.18.56 ಎವರೇಜ್ ಹೊಂದಿದ್ದು 51.1 ಸ್ಟ್ರೈಕ್ ರೇಟ್ ಪಡೆದಿದ್ದಾರೆ.
INDvAUS : Border – Gavaskar series will be held in Jaddu-Ashwin Kamal…








