ಅಮಲಿನಲ್ಲಿ ವಿದ್ಯಾರ್ಥಿನಿ – ವಿದ್ಯಾರ್ಥಿಗಳ ಹೊಡೆದಾಟ
ಉಡುಪಿಯ ಪಡುಬಿದ್ರೆ ಪೇಟೆಯಲ್ಲಿ ನಡೆದ ಘಟನೆ
ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದ ಪಡುಬಿದ್ರೆ ಪೊಲೀಸರು
ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿ- ವಿದ್ಯಾರ್ಥಿಗಳು ನಡುರಸ್ತೆಯಲ್ಲಿ ಹೊಡೆದಾಡಿರುವ ಘಟನೆ ಉಡುಪಿಯ ಪಡುಬಿದ್ರ ಪೇಟೆಯಲ್ಲಿ ನಡೆದಿದೆ.
ಒಂದೇ ಸ್ಕೂಟರ್ ರಲ್ಲಿ ಓರ್ವ ವಿದ್ಯಾರ್ಥಿನಿ ಹಾಗೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿದ್ದು ಮಾರ್ಗ ಮಧ್ಯದಲ್ಲಿ ಪೆಟ್ರೋಲ್ ಖಾಲಿಯಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದ ಅವರುಗಳು ಬಳಿಕ ಹೊಡೆದಾಟವನ್ನೂ ಮಾಡಿಕೊಂಡಿದ್ದಾರೆ.
ಇದನ್ನು ನೋಡಿದ ಸ್ಥಳೀಯರು ಬಿಡಿಸಲು ಮುಂದಾದರೂ ಸಾಧ್ಯವಾಗಿಲ್ಲ. ಇದರಿಂದ ಪಡುಬಿದ್ರೆ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ವಿದ್ಯಾರ್ಥಿಗಳನ್ನ ಬಿಡಿಸಲು ಮುಂದಾಗಿದ್ದಾರೆ.
ಆದ್ರೆ ವಿದ್ಯಾರ್ಥಿಗಳು ಪೊಲೀಸರಿಗೆ ಅವಾಜ್ ಹಾಕಿದ್ದಾರೆ.
ಕೊಂಚ ಸಮಯದ ವಾಗ್ವಾದದ ಬಳಿಕ ಸ್ಥಳೀಯರ ಸಹಾಯದಿಂದ ಪೊಲೀಸರು ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.