ಬಡವರ ಹೃದಯಕ್ಕೆ ಮಿಡಿದ ಇನ್ಫೋಸಿಸ್ ಪ್ರತಿಷ್ಟಾನ- ಆಸ್ಪತ್ರೆ ಕೊಡುಗೆ
ಇನ್ಪೋಸಿಸ್ ಪ್ರತಿಷ್ಠಾನ ಬಡವರಿಗೆ ಉಪಯೋಗವಾಗುವಂತಹ ಯೋಜನೆಯೊಂದನ್ನ ಜನರಿಗೆ ಉಡುಗೊರೆಯಾಗಿ ನೀಡುತ್ತಿದೆ. 103 ಕೋಟಿ ರೂಗಳ ವೆಚ್ಚದಲ್ಲಿ ಕಟ್ಟಿರುವ ಹೊಚ್ಚ ಹೊಸ ಹೃದ್ರೋಗ ಆಸ್ಪತ್ರೆಯನ್ನ ಕೊಡುಗೆಯಾಗಿ ನೀಡುತ್ತಿದೆ. 350 ಬೆಡ್ ಗಳ ಮಲ್ಟಿ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆ ಇದಾಗಲಿದ್ದು. 100 ಐಸಿಯು ಬೆಡ್, 250 ಜನರಲ್ ವಾರ್ಡ್ ಬೆಡ್, 2 ಆಪರೇಷನ್ ಥಿಯೇಟರ್ , 1 ಹೈ ಬ್ರಿಡ್ ಆಪರೇಷನ್ ಥಿಯೇಟರ್, 2 ಕಾರ್ಡಿಕಲ್ ಕ್ಯಾಥ್ ಲ್ಯಾಬ್ ಗಳನ್ನು ಆಸ್ಪತ್ರೆ ಒಳಗೊಂಡಿದೆ.
ನಾರಾಯಣ ಮೂರ್ತಿ ದಂಪತಿಗಳು 2018ರಲ್ಲಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಬರುವುದನ್ನು ನೋಡಿ ಹೋಗಿದ್ದರು ಹಾಸಿಗೆಗಳ ಕೊರತೆ ಇರುವುದನ್ನು ಗಮನಿಸಿ ಭೇಟಿ ನೀಡಿ ಎರಡೇ ದಿನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರು ಕರೆ ಮಾಡಿ ಆಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಮೂರನೇ ದಿನವೇ ಜಯದೇವಕ್ಕೆ ಇನ್ಫೋಸಿಸ್ ಎಂಜಿನಿಯರ್ಸ್ ಭೇಟಿ ನೀಡಿ ಪ್ಲಾನ್ ಮಾಡಿದ್ರು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ ಮಜುನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದಿಂದ 350 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣವಾದ ಹಿನ್ನೆಲೆ ಜಯದೇವ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 1,050ಕ್ಕೆ ಏರಿಕೆಯಾಗಲಿದೆ. ಹಾಸಿಗೆಗಳ ಸಾಮರ್ಥ್ಯ ಹೆಚ್ಚಳಗೊಂಡ ಹಿನ್ನೆಲೆ ದಕ್ಷಿಣ ಏಷ್ಯಾದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.