ಅಂತರಾಷ್ಟ್ರೀಯ ಅಗ್ನಿಶಾಮಕ ದಿನ – ಇತಿಹಾಸ ಮತ್ತು ಮಹತ್ವ ತಿಳಿಯಲು ಈ ಸ್ಟೋರಿ ಓದಿ…
ಇಂದು International Firefighters’ Day ಅಂದರೆ ಅಂತರಾಷ್ಟ್ರೀಯ ಅಗ್ನಿಶಾಮಕ ದಿನ. ಪ್ರತಿ ವರ್ಷ ಮೇ 4 ರಂದು ಸಮುದಾಯ ಮತ್ತು ಪರಿಸರವನ್ನು ಸುರಕ್ಷಿತವಾಗಿಡಲು ತಮ್ಮ ಕೈಲಾದಷ್ಟು ಪ್ರಯತ್ನ ಪಡುವ ಅಗ್ನಿಶಾಮಕ ಸಿಬ್ಬಂದಿಯ ತ್ಯಾಗವನ್ನು ಗುರುತಿಸಲು ಮತ್ತು ಗೌರವಿಸಲು ಈ ದಿನವನ್ನು ಪ್ರತಿ ವರ್ಷ ಜಾಗತಿಕವಾಗಿ ಆಚರಿಸಲಾಗುತ್ತದೆ. ಬೆಂಕಿಯಿಂದ ಜನರು ಮತ್ತು ವನ್ಯಜೀವಿಗಳನ್ನ ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಅಗ್ನಿಶಾಮಕ ದಳದವರನ್ನು ಗೌರವಿಸುವುದು ಮತ್ತು ಧನ್ಯವಾದ ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಅಂತರರಾಷ್ಟ್ರೀಯ ಅಗ್ನಿಶಾಮಕ ದಿನದ ಇತಿಹಾಸ
ಇದನ್ನು ಮೊದಲು 1999 ರಲ್ಲಿ ಆಚರಿಸಲಾಯಿತು. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಲಿಂಟನ್ ಪೊದೆಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ. ಬೆಂಕಿ ನಂದಿಸಲು ಹೊರಟಿದ್ದ ಐವರು ಅಗ್ನಿ ಶಾಮಕ ಸಿಬ್ಬಂದಿಗಳ ತಂಡ ವಿರುದ್ಧ ದಿಕ್ಕಿಗೆ ಗಾಳಿ ಬೀಸಿದ್ದರಿಂದ ಸುಟ್ಟು ಕರಕಲಾಗಿದ್ದಾರೆ.
ಹವಾಮಾನ ಇಲಾಖೆಯು ವಿರುದ್ಧ ದಿಕ್ಕಿನಲ್ಲಿ ಯಾವುದೇ ಗಾಳಿ ಬೀಸುವ ಮುನ್ಸೂಚನೆಯನ್ನು ನೀಡಿರಲಿಲ್ಲ, ಆದರೆ ಗಾಳಿಯು ದಿಕ್ಕನ್ನ ಹಠಾತ್ ಬದಲಾಯಿಸಿದ್ದರಿಂದ, ಐವರು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯಲ್ಲಿ ಕೆನ್ನಾಲೆಗೆಗೆ ತುತ್ತಾಗಿದ್ದರು. ಅವರ ಸಾವಿನ ಗೌರವಾರ್ಥವಾಗಿ ಪ್ರತಿ ವರ್ಷ ಮೇ 4 ರಂದು ಅಂತರರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಆಚರಿಸಲಾಗುತ್ತದೆ.
ಯುರೋಪ್ ನಲ್ಲಿ ಪ್ರಾರಂಭವಾದದ್ದು ಹೀಗೆ
ಅದೇ ಸಮಯದಲ್ಲಿ, ಈ ದಿನವನ್ನು ಆಚರಿಸಲು ಮುಖ್ಯ ಕಾರಣವೆಂದರೆ ಮೇ 4 ರಂದು ನಿಧನರಾದ ಸೇಂಟ್ ಫ್ಲೋರಿನ್. ಅವರು ಸಂತ ಮತ್ತು ಅಗ್ನಿಶಾಮಕ ಸಿಬ್ಬಂದಿಯಾಗಿದ್ದರು. ಒಮ್ಮೆ ಅವರ ಗ್ರಾಮದಲ್ಲಿ ಒಮ್ಮೆ ಬೆಂಕಿ ಕಾಣಿಸಿಕೊಂಡಿತು, ಈ ಸಂದರ್ಭದಲ್ಲಿ ಅವರು ಕೇವಲ ಒಂದು ಬಕೆಟ್ ನೀರಿನಿಂದ ಬೆಂಕಿಯನ್ನು ನಂದಿಸಿದರು ಎಂದು ಹೇಳಲಾಗುತ್ತದೆ. ಇದರ ನಂತರ, ಪ್ರತಿ ವರ್ಷ ಮೇ 4 ರಂದು, ಯುರೋಪ್ನಲ್ಲಿ ಈ ದಿನವನ್ನು ಆಚರಿಸಲಾಯಿತು.
ಅಂತರಾಷ್ಟ್ರೀಯ ಅಗ್ನಿಶಾಮಕ ದಿನವನ್ನು ಹೇಗೆ ಆಚರಿಸಲಾಗುತ್ತದೆ?
ಅಂತರರಾಷ್ಟ್ರೀಯ ಅಗ್ನಿಶಾಮಕ ದಿನದ ಸಂಕೇತವು ಎರಡು ಬಣ್ಣದ ರಿಬ್ಬನ್ ಆಗಿದೆ, ಬೆಂಕಿಗೆ ಕೆಂಪು ಮತ್ತು ನೀರಿಗೆ ನೀಲಿ. ಯುರೋಪ್ನಲ್ಲಿ ಈ ದಿನದಂದು, ಮಧ್ಯಾಹ್ನ 30 ಸೆಕೆಂಡುಗಳ ಕಾಲ ಅಗ್ನಿಶಾಮಕ ದಳದ ಸೈರನ್ಗಳನ್ನು ನುಡಿಸಲಾಗುತ್ತದೆ. ಇದರ ನಂತರ, ಒಂದು ನಿಮಿಷ ಮೌನವನ್ನು ಆಚರಿಸಲಾಗುತ್ತದೆ, ಇದರಲ್ಲಿ ಅಗ್ನಿಶಾಮಕರಿಗೆ ಗೌರವ ಮತ್ತು ಧನ್ಯವಾದಗಳನ್ನ ಸಮರ್ಪಿಸಲಾಗುತ್ತಿದೆ.