Interpol Meet: ಇಂಟರ್ಪೋಲ್ ಸಭೆಯಲ್ಲಿ ವೇದಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ…
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮಂತ್ರಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದ ಇಂಟರ್ಪೋಲ್ ಸಾಮಾನ್ಯ ಸಭೆಯಲ್ಲಿ ವೇದಗಳ ಬಗ್ಗೆ ಪ್ರಸ್ತಾಪಿಸಿದರು. ಎಲ್ಲಾ ಕಡೆಯಿಂದ ಉತ್ತಮ ವಿಚಾರಗಳು ಬರಲಿ ಎಂದು ವೇದಗಳು ಹೇಳುತ್ತವೆ. ಭಾರತವು ಅಂತಾರಾಷ್ಟ್ರೀಯ ಸಹಕಾರದಲ್ಲಿ ನಂಬಿಕೆ ಹೊಂದಿದೆ ಎಂದು ಮೋದಿ ಹೇಳಿದ್ದಾರೆ.
ಇಂಟರ್ ಪೋಲ್ ಸಾಮಾನ್ಯ ಸಭೆಯ 90ನೇ ಅಧಿವೇಶನ ಮಂಗಳವಾರ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆರಂಭವಾಗಿದೆ. 195 ದೇಶಗಳು ಇದರಲ್ಲಿ ಸದಸ್ಯತ್ವ ಹೊಂದಿವೆ. ವಿವಿಧ ದೇಶಗಳ ಸಚಿವರು, ಆಯಾ ದೇಶಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರೀಯ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಗಳಲ್ಲಿ ಭಾಗವಹಿಸಿದ್ದರು.
ಈ ಸಭೆಗಳನ್ನ ಉದ್ದೇಶಿಸಿ ಮಾತನಾಡಿದ ಮೋದಿ, ಎಲ್ಲಾ ಕಡೆಯಿಂದ ಉತ್ತಮ ವಿಚಾರಗಳು ಬರಬೇಕು ಎಂದು ವೇದಗಳು ಹೇಳುತ್ತವೆ. ಭಾರತವು ಅಂತಾರಾಷ್ಟ್ರೀಯ ಸಹಕಾರದಲ್ಲಿ ನಂಬಿಕೆ ಹೊಂದಿದೆ ಎಂದು ಹೇಳಿದರು.
ಇಂಟರ್ಪೋಲ್ ಐತಿಹಾಸಿಕ ಮೈಲಿಗಲ್ಲು ಸಮೀಪಿಸುತ್ತಿದೆ. 2023ರಲ್ಲಿ 100ನೇ ವರ್ಷಾಚರಣೆ ನಡೆಯಲಿದೆ ಎಂದರು. ಇದು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಸಾರ್ವತ್ರಿಕ ಸಹಕಾರಕ್ಕೆ ಕರೆ ನೀಡುತ್ತದೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಅವರು ಹೇಳಿದರು.
ಬೆದರಿಕೆ ಅಂತಾರಾಷ್ಟ್ರೀಯವಾಗಿದ್ದಾಗ, ಪ್ರತಿಕ್ರಿಯೆ ಸ್ಥಳೀಯವಾಗಿರಬಾರದು. ಈ ಎಲ್ಲಾ ಬೆದರಿಕೆಗಳನ್ನು ಸೋಲಿಸಲು ಇಡೀ ಜಗತ್ತು ಒಗ್ಗೂಡಬೇಕಾದ ಸಮಯ ಬಂದಿದೆ ಎಂದು ಹೇಳಿದರು. ವಿಶ್ವಾದ್ಯಂತ ಭಯೋತ್ಪಾದನೆಯನ್ನು ಹತ್ತಿಕ್ಕಲು ಅಂತಾರಾಷ್ಟ್ರೀಯ ಕಾರ್ಯತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
Interpol Meet: Modi mentioned Vedas in Interpol meeting…