ಐಪಿಎಲ್ 2021 : ಲೆಕ್ಕ ಸರಿ ಮಾಡುತ್ತಾ ಯಂಗ್ ಡೆಲ್ಲಿ..?

1 min read
IPL 2021

ಐಪಿಎಲ್ 2021 : ಲೆಕ್ಕ ಸರಿ ಮಾಡುತ್ತಾ ಯಂಗ್ ಡೆಲ್ಲಿ..?

ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಫೈನಲ್ ನಲ್ಲಿ ಡೆಲ್ಲಿಗೆ ಮುಂಬೈ ಸೋಲುಣಿಸಿತ್ತು. ಇವತ್ತಿನ ಪಂದ್ಯದಲ್ಲಿ ಗೆದ್ದು ಡೆಲ್ಲಿ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ.

ಹೆಡ್ ಟು ಹೆಡ್

ಐಪಿಎಲ್ ಇತಿಹಾಸದಲ್ಲಿ 28 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಮುಂಬೈ 16 ಬಾರಿ ಗೆದ್ದಿದ್ದೇ ಡೆಲ್ಲಿ 12 ಬಾರಿ ಜಯ ಸಾಧಿಸಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಮುಂಬೈ ಜಯದ ಯಾತ್ರೆ ನಡೆಸಿದೆ.

ಗ್ರೌಂಡ್ ರಿಪೋರ್ಟ್

ಸ್ಲೋ ಪಿಚ್ ಇದ್ದು, ಸೆಕೆಂಡ್ ಬ್ಯಾಟಿಂಗ್ ಮಾಡೋರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಮಾಡೋದು ಸೂಕ್ತ. ಇನ್ನು ಪಿಚ್ ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲರವಾಗಿದೆ.

ಬಲಾಬಲಗಳೇನು..?

ಮುಂಬೈ ತಂಡದ ವಿಚಾರಕ್ಕೆ ಬಂದ್ರೆ ಅನ್ ಬೀಟನ್ ಟೀಂನಲ್ಲಿ ಬ್ಯಾಟಿಂಗ್ ಪ್ರಾಬ್ಲಂ ಕಾಣಿಸಿಕೊಂಡಿದೆ. ಮುಖ್ಯವಾಗಿ ಚೆನ್ನೈ ಪಿಚ್ ನಲ್ಲಿ ಮುಂಬೈ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಆಡಿರೋ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಮಾತ್ರ ಅರ್ಧಶತಕ ಗಳಿಸಿದ್ದಾರೆ. ಮುಖ್ಯವಾಗಿ ಇಶಾನ್ ಕಿಶಾನ್, ಹಾರ್ಧಿಕ್ ಪಾಂಡ್ಯ ಪಾರ್ಮ್ ತಂಡಕ್ಕೆ ತಲೆಬಿಸಿ ತಂದೊಡ್ಡಿದೆ.

ಇನ್ನ ತಂಡಕ್ಕೆ ಪ್ಲಸ್ ಆಗಿರೋದು ಬೌಲಿಂಗ್ ಡಿಪಾರ್ಟ್‍ಮೆಂಟ್. ಸಾಧಾರಣ ಮೊತ್ತವನ್ನೂ ತಂಡದ ಬೌಲರ್ ಗಳು ಡಿಫೆಂಡ್ ಮಾಡಿಕೊಳ್ಳುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

IPL 2021

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿಚಾರಕ್ಕೆ ಬಂದ್ರೆ ಬೌಲಿಂಗ್ ಸ್ವಲ್ಪ ವೀಕ್ ಆಗಿದೆ ಅನ್ಸ್ತಿದೆ. ಮುಖ್ಯವಾಗಿ ಅಕ್ಷರ್ ಪಟೇಲ್, ನೊಕಿಯಾ ಕ್ವರಂಟೈನ್ ನಲ್ಲಿರುವುದು ತಂಡಕ್ಕೆ ಸೆಟ್ ಬ್ಯಾಕ್ ಆಗಿದೆ. ಅಂದ್ರೆ ತಂಡದಲ್ಲಿ ಅಶ್ವಿನ್, ಅಕ್ಷರ್, ನೋಕಿಯಾ, ರಬಾಡ ಟ್ರಡಿಷನ್ ಪಾರ್ಮೆಟ್ ಇತ್ತು. ಆದ್ರೆ ಈ ಬಾರಿ ಅದು ಬ್ರೇಕ್ ಆಗಿರುವುದು ತಂಡದ ಮೇಲೆ ಪರಿಣಾಮ ಬೀರ್ತಾ ಇದೆ.

ಬ್ಯಾಟಿಂಗ್ ವಿಚಾರಕ್ಕೆ ಬಂದ್ರೆ ಧವನ್, ಪೃಥ್ವಿ ಶಾ, ಪಂತ್ ರೆಡಡ್ ಹಾರ್ಸ್ ಫಾರ್ಮ್ ನಲ್ಲಿರುವುದು ತಂಡದ ಬಲ ಹೆಚ್ಚಿಸಿದೆ. ಆದ್ರೆ ಅಂಜಿಕ್ಯಾ ರಹಾನೆ ಒಳ್ಳೆ ಟಚ್ ನಲ್ಲಿ ಕಾಣಿಸದೇ ಇರೋದು, ಸ್ಮಿತ್ ಕೂಡ ರನ್ ಗಾಗಿ ಪರದಾಡುತ್ತಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ.

ಬೆಸ್ಟ್ ಇಲೆವೆನ್

ಇವತ್ತಿನ ಪಂದ್ಯದಲ್ಲಿ ಮುಂಬೈ ಒಂದು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಬಹುದು. ಅದು ಮಿಲ್ನೆ ಬದಲಾಗಿ, ಜಯಂತ್ ಯಾದವ್ ಅವರನ್ನ ಆಡಿಸಬಹುದು. ಯಾಕೆಂದ್ರೆ ಡೆಲ್ಲಿಯಲ್ಲಿ ಧವನ್, ಪಂತ್ ಎಡಗೈ ಬ್ಯಾಟ್ಸ್ ಮೆನ್ ಗಳಿರೋ ಕಾರಣ ಆಫ್ ಸ್ಪಿನ್ನರ್ ಆದ ಜಯಂತ್ ಯಾಧನ್ ಅವರನ್ನ ಇಂದಿನ ಪಂದ್ಯದಲ್ಲಿ ಆಡಿಸುವ ಸಾಧ್ಯತೆಗಳಿವೆ.

ಇನ್ನುಳಿದಂತೆ ಡಿಕಾಕ್, ರೋಹಿತ್, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್, ಹಾರ್ಧಿಕ್ ಪಾಂಡ್ಯ, ಪೋಲಾರ್ಡ್, ಕೃನಾಲ್ ಪಾಂಡ್ಯ, ಜಯಂತ್ ಯಾದವ್, ಟ್ರೆಂಟ್ ಬೋಲ್ಟ್, ರಾಹುಲ್ ಚಹಾರ್, ಬೂಮ್ರಾ

ಇನ್ನ ಡೆಲ್ಲಿ ಟೀಂ ವಿಚಾರಕ್ಕೆ ಬಂದ್ರೆ ಚೆನ್ನೈನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಅಮಿತ್ ಮಿರ್ಶಾ ಅವರನ್ನ ಆಡಿಸುವ ಸಾಧ್ಯತೆಗಳಿವೆ.

ಉಳಿದಂತೆ ಪೃಥ್ವಿ ಶಾ, ಧವಾನ್, ಸ್ಮಿತ್, ರಿಶಬ್ ಪಂತ್, ಸ್ಟೋಯ್ನಿಸ್, ಲಲಿತ್ ಯಾವದ್, ಕ್ರಿಸ್ ವೋಕ್ಸ್, ರಬಾಡ, ಅಶ್ವಿಐಪಿಎಲ್ 2021 : ಮುಂಬೈ – ಡೆಲ್ಲಿ ದಂಗಲ್ ನಲ್ಲಿ ಗೆಲ್ಲೋರು ಯಾರುನ್, ಅಮಿತ್ ಮಿಶ್ರಾ, ಅವೇಶ್ ಖಾನ್.

ವಿನ್ನಿಂಗ್ ಚಾನ್ಸ್

ಮುಂಬೈ ತಂಡ ಚೆನ್ನೈನಲ್ಲಿ ಮೂರು ಮ್ಯಾಚ್ ಗಳನ್ನ ಆಡಿದೆ. ಡೆಲ್ಲಿ ತಂಡಕ್ಕೆ ಇದು ಮೊದಲ ಮ್ಯಾಚ್ ಆಗಿರೋದ್ರಿಂದ ಮುಂಬೈಗೆ ಸ್ವಲ್ಪ ಅಡ್ವಾಂಟೇಜ್ ಇರುತ್ತೆ. ಆದ್ದರಿಂದ ಮುಂಬೈ ತಂಡ ಗೆಲ್ಲುವ ಫೇವರೇಟ್ ಆಗಿರುತ್ತೆ. ಆದ್ರೆ ಡೆಲ್ಲಿ ತಂಡವನ್ನ ನೋಡಿದ್ರೆ ಸ್ವಲ್ಪ ಎಕ್ಸ್ಟ್ರಾ ಎಫರ್ಟ್ ಹಾಕಿದ್ರೆ ಡೆಲ್ಲಿ ಕೂಡ ಗೆಲ್ಲಬಹುದು. ಒಟ್ಟಾರೆ 59 % ಮುಂಬೈ ಇದ್ರೆ ಡೆಲ್ಲಿ 49% ಗೆಲ್ಲೋ ಚಾನ್ಸ್ ಇದೆ.

lock

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd