ಸನ್ರೈಸರ್ಸ್ ಹೈದ್ರಾಬಾದ್ ಐಪಿಎಲ್ ಸೀಸನ್ 14ರಿಂದ ಹೊರ ಬಿದ್ದಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇ- ಆಫ್ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿದೆ. ಹೀಗಾಗಿ ದುಬೈನಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದ್ರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಕೂತೂಹಲದ ಅಖಾಡವಾಗಿದೆ.
ಸನ್ರೈಸರ್ಸ್ ಹೈದ್ರಾಬಾದ್ಗೆ ಈ ಪಂದ್ಯದಿಂದ ಸಿಗುವುದು ಏನೂ ಇಲ್ಲ. ಆದರೆ ಕೆಕೆಆರ್ ತಂಡದ ಹಣೆಬರಹವನ್ನು ಬರೆಯಬಹುದು. ಅಷ್ಟೇ ಅಲ್ಲ ಟೂರ್ನಿಯಿಂದ ಹೊರಹೋಗುವ ತಂಡ ಯಾವುದು ಅನ್ನುವುದನ್ನು ನಿರ್ಧಾರ ಕೂಡ ಮಾಡಬಹುದು.
ಸನ್ರೈಸರ್ಸ್ ಬ್ಯಾಟಿಂಗ್ನಲ್ಲಿ ಸಾಹಾ, ವಿಲಿಯಮ್ಸನ್ ರಂತಹ ಘಟಾನುಘಟಿಗಳಿದ್ದರೂ ರನ್ ಬರುತ್ತಿಲ್ಲ. ಸಮದ್, ರಶೀದ್, ಹೋಲ್ಡರ್ರಂತಹ ಆಲ್ರೌಂಡರ್ಗಳಿಂದಲೂ ತಂಡಕ್ಕೆ ಲಾಭವಾಗಿಲ್ಲ. ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್ ಮತ್ತು ಸಂದೀಪ್ ಶರ್ಮಾರಂತಹ ಬೌಲರ್ಗಳು ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟಿಲ್ಲ. ಹೀಗಾಗಿ ಪಾಯಿಂಟ್ ಟೇಬಲ್ನಲ್ಲಿ ಹೈದ್ರಾಬಾದ್ ಕೊನೆಯ ಸ್ಥಾನದಲ್ಲಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇ-ಆಫ್ ಸ್ಥಾನಕ್ಕಾಗಿ ಹೋರಾಡುತ್ತಿದೆ. 11 ಪಂದ್ಯಗಳಿಂದ 10 ಅಂಕ ಪಡೆದಿರುವ ಕೊಲ್ಕತ್ತಾ ಪ್ಲಸ್ ರನ್ ರೇಟ್ ಹೊಂದಿದೆ.
ಈ ಪಂದ್ಯವನ್ನು ಗೆ್ದರೆ ಕೆಕೆಆರ್ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಮಾಡು ತಂಡಗಳ ಪೈಕಿ 2 ಅಂಕವನ್ನು ಹೆಚ್ಚಾಗಿ ಪಡೆಯಲಿದೆ. ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ ಬ್ಯಾಟಿಂಗ್ ಫಾರ್ಮ್ ಕೆಕೆಆರ್ ಬಲವಾಗಿದೆ.
ಕಾರ್ತಿಕ್ ಮತ್ತು ರಸೆಲ್ ಕೆಳಸರದಿಯ ಬಲ. ಮೊರ್ಗಾನ್ ಒಬ್ಬರನ್ನು ಬಿಟ್ರೆ ಉಳಿದವರ ಬ್ಯಾಟಿಂಗ್ ಬಗ್ಗೆ ಚಿಂತಿಲ್ಲ. ಬೌಲಿಂಗ್ನಲ್ಲೂ ವರುಣ್ ಚಕ್ರವರ್ತಿ ಮತ್ತು ಸುನೀಲ್ ನರೈನ್ ಮಿಂಚುತ್ತಿದ್ದಾರೆ.
ವೇಗದ ಬೌಲರ್ಗಳು ಕೊಂಚ ಸಹಕಾರ ನೀಡಿದರೆ ಕೆಕೆಆರ್ ಗೆಲುವು ಸುಲಭವಾಗಬಹುದು.
ಸಂಭಾವ್ಯ XI
ಸನ್ರೈಸರ್ಸ್ ಹೈದ್ರಾಬಾದ್
1.ಜೇಸನ್ ರಾಯ್, 2. ವೃದ್ಧಿಮಾನ್ ಸಾಹಾ, 3. ಕೇನ್ ವಿಲಿಯಮ್ಸನ್, 4. ಪ್ರಿಯಮ್ ಗಾರ್ಗ್, 5. ಅಭಿಷೇಕ್ ಶರ್ಮಾ, 6. ಜೇಸನ್ ಹೋಲ್ಡರ್, 7. ಅಬ್ದುಲ್ ಸಮದ್, 8. ರಶೀದ್ ಖಾನ್, 9. ಭುವನೇಶ್ವರ್ ಕುಮಾರ್, 10. ಸಿದ್ಧಾರ್ಥ್ ಕೌಲ್, 11. ಸಂದೀಪ್ ಶರ್ಮಾ
ಕೊಲ್ಕತ್ತಾ ನೈಟ್ರೈಡರ್ಸ್
- ಶುಭ್ಮನ್ ಗಿಲ್, 2. ವೆಂಕಟೇಶ್ ಅಯ್ಯರ್, 3. ರಾಹುಲ್ ತ್ರಿಪಾಠಿ, 4. ನಿತೀಶ್ ರಾಣಾ, 5. ಇಯಾನ್ ಮೊರ್ಗಾನ್, 6. ದಿನೇಶ್ ಕಾರ್ತಿಕ್, 7. ಸುನೀಲ್ ನರೈನ್, 8. ಆಂಡ್ರೆ ರಸೆಲ್/ ಟಿಮ್ಸೌಥಿ, 9. ಲೊಕಿ ಫರ್ಗ್ಯೂಸನ್, 10. ಪ್ರಸಿಧ್ ಕೃಷ್ಣ, 11. ವರುಣ್ ಚಕ್ರವರ್ತಿ









