ಐಪಿಎಲ್ 2021- ಕೆಕೆಆರ್ ಗೆಲುವನ್ನು ಕಸಿದುಕೊಂಡ ಮುಂಬೈ ಇಂಡಿಯನ್ಸ್.. !
ಚಾಂಪಿಯನ್ ತಂಡದ ಘನತೆಗೆ ತಕ್ಕಂತೆ ಆಟವನ್ನಾಡಿದ ಮುಂಬೈ ಇಂಡಿಯನ್ಸ್ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹತ್ತು ರನ್ ಗಳಿಂದ ಪರಾಭವಗೊಳಿಸಿತ್ತು.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 152 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ 43 ರನ್ ಹಾಗೂ ಸೂರ್ಯಕುಮಾರ್ 56 ರನ್ ದಾಖಲಿಸಿದ್ರು. ಇನ್ನುಳಿದಂತೆ ಕೆಕೆಆರ್ ದಾಳಿಗೆ ಕಂಗೆಟ್ಟ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮೆನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ್ರು.
ಕೆಕೆಎಆರ್ ತಂಡದ ಪರ ಆಂಡ್ರೆ ರಸೆಲ್ ಎರಡು ಓವರ್ ಗಳಲ್ಲಿ 15 ರನ್ ನೀಡಿ ಐದು ವಿಕೆಟ್ ಉರುಳಿಸಿ ಮುಂಬೈ ಇಂಡಿಯನ್ಸ್ ಗೆ ಆಘಾತ ನೀಡಿದ್ರು.
ipl 2021 -Rahul Chahar shines as Mumbai Indians rally to beat KKR
ಗೆಲ್ಲಲು 153 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಕೆಕೆಆರ್ ತಂಡದ ಒಂದು ಹಂತದಲ್ಲಿ ಗೆಲುವಿನ ಸನೀಹದಲ್ಲಿತ್ತು. ಯಾಕಂದ್ರೆ ಆರಂಭಿಕರಾದ ನಿತೇಶ್ ರಾಣಾ ಮತ್ತು ಶುಬ್ಮನ್ ಗಿಲ್ ಮೊದಲ ವಿಕೆಟ್ ಗೆ 7.5 ಓವರ್ ಗಳಲ್ಲಿಒ 72 ರನ್ ಕಲೆ ಹಾಕಿದ್ರು.
ಈ ಹಂತದಲ್ಲಿ 33 ರನ್ ಗಳಿಸಿದ್ದ ಶುಬ್ಮನ್ ಗಿಲ್ ಅವರಿಗೆ ರಾಹುಲ್ ಚಾಹರ್ ಪೆವಿಲಿಯನ್ ದಾರಿ ತೋರಿಸಿದ್ರು. ಹಾಗೇ ಐದು ರನ್ ಗಳಿಸಿದ್ದ ರಾಹುಲ್ ತ್ರಿಪಾಠಿ (5) ಮತ್ತು ನಾಯಕ ಇಯಾನ್ ಮೊರ್ಗಾನ್ (7) ಹಾಗೂ 57 ರನ್ ಸಿಡಿಸಿದ್ದ ಆರಂಭಿಕ ನಿತೀಶ್ ರಾಣಾ ವಿಕೆಟ್ ಕಬಳಿಸುವ ಮೂಲಕ ಕೆಕೆಆರ್ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದ್ರು.
ಈ ನಡುವೆ ಶಕೀಬ್ ಆಲ್ ಹಸನ್ ಅವರನ್ನು ಕೃನಾಲ್ ಪಾಂಡ್ಯ ಬಲಿ ಪಡೆದುಕೊಂಡ್ರೆ, ಅಪಾಯಯಕಾರಿ ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ ಅವರನ್ನು ಕೊನೆಯ ಓವರ್ ನಲ್ಲಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದ್ರು.
ಅಂತಿಮವಾಗಿ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಶಕ್ತವಾಯ್ತು. ದಿನೇಶ್ ಕಾರ್ತಿಕ್ ಅಜೇಯ 8 ರನ್ ಹಾಗೂ ಹರ್ಭಜನ್ ಸಿಂಗ್ ಅಜೇಯ 2 ರನ್ ಗಳಿಸಿದ್ರು. ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಹುಲ್ ಚಾಹರ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.